ಶಿರಸಿ : ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಶಿಷ್ಯ ಸ್ವೀಕಾರ ವಿಧಿ ವಿಧಾನಗಳ ಐದು ದಿನಗಳ ಮಹೋತ್ಸವಕ್ಕೆ ಭಾನುವಾರ ಚಾಲನೆ‌ ನೀಡಲಾಗಿದೆ. ಶಿಷ್ಯ ಸ್ವೀಕಾರ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು, ಧರ್ಮಸಭೆ, ಸಾಂಸ್ಕೃತಿಕ ‌ಕಾರ್ಯಕ್ರಮಗಳ ಮೂಲಕ ಸ್ವರ್ಣವಲ್ಲೀ ಚರಿತ್ರೆಯಲ್ಲಿ ದಾಖಲಾಗುವಂತೆ ಆರಂಭವಾಗಿದೆ. ಮಠದಲ್ಲಿ ನಿರ್ಮಾಣ ಮಾಡಲಾದ ಅಲಂಕೃತ ಯಾಗ ಶಾಲೆಯಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಸ್ವಾಮೀಜಿ ಸಾನ್ನಿಧ್ಯದಲ್ಲಿ, ನೂತನ ಶಿಷ್ಯರಾದ ವಿ. ನಾಗರಾಜ ಭಟ್ಟ ಅವರ ಉಪಸ್ಥಿತಿಯಲ್ಲಿ ‌ಆರಂಭಗೊಂಡಿದೆ. ಗಣಪತಿ ಪೂಜೆ, ಗೋಪೂಜೆ, ಗೋ ದಾನ, ಕೂಷ್ಮಾಂಡ ಹವನ, ಭಾನುವಾರ ಒಂದು ಲಕ್ಷ ಗಾಯತ್ರೀ ಜಪ, ದಶಾಂಶ ಹವನ ನಡೆದವು. ಐದು ವೇದಗಳ ಪಾರಾಯಣ, ಮಹಾರುದ್ರ ಜಪ ಪ್ರಾರಂಭವಾದವು.

ವೇ.ಮೂ ಭಾಲಚಂದ್ರ ಉಪಾಧ್ಯಾಯರು ಗೋಕರ್ಣ, ವೇಮೂ ಪ್ರಭಾಕರ ಉಪಾಧ್ಯ ಗೋಕರ್ಣ, ವಿ. ಭಾಲಚಂದ್ರ ಶಾಸ್ತ್ರಿಗಳು ಸ್ವರ್ಣವಲ್ಲಿ, ವೇಮೂ ನರಸಿಂಹ ಜೊಯಿಸರು ಬಾಡಲಕೊಪ್ಪ, ವೇಮೂ ಕೃಷ್ಣ ಜೋಯಿಸ ಮೂಲೆಮನೆ ಹಾಗೂ ವೇದ ವಿದ್ವಾಂಸರಿಂದ ಕ್ರಾರ್ಯಕ್ರಮ ಆರಂಭವಾಯಿತು. ಎಂಬತ್ತಕ್ಕೂ ಅಧಿಕ ವೈದಿಕರು ನಡೆಸಿಕೊಡುತ್ತಿದ್ದಾರೆ. ಸಮಾಜ ನಿರಂತರವಾಗಿ ಧರ್ಮ ಮಾರ್ಗದಲ್ಲಿ ಮುನ್ನಡೆಯುವುದಕ್ಕೆ ಗುರುಗಳು, ಜ್ಞಾನಿಗಳ ಮಾರ್ಗದರ್ಶನ ಅಗತ್ಯವಾಗಿದೆ. ಅದಕ್ಕಾಗಿ ಗುರು ಪೀಠಗಳು ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

RELATED ARTICLES  ಭಟ್ಕಳದಲ್ಲಿ ಮತ್ತೆ ಹಾರಾಡಿದ ಹನುಮ ಧ್ವಜ : ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಸರಕಾರಕ್ಕೆ ಸೆಡ್ಡು

ಶ್ರೀ ಸಂಸ್ಥಾನದ ಸುಧರ್ಮ ಸಭಾಂಗಣದಲ್ಲಿ ಭಾನುವಾರ ಆರಂಭವಾದ ಶಿಷ್ಯ ಸ್ವೀಕಾರ ಮಹೋತ್ಸವ ಸಮಾರಂಭದ ಐದು ದಿನಗಳ ಕಾರ್ಯಕ್ರಮಗಳ ಚಾಲನೆಯ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸಮಾಜದ ಎಲ್ಲ ಕ್ಷೇತ್ರಗಳು ಕಲುಷಿತಗೊಳ್ಳುತ್ತಿವೆ. ನೈತಿಕತೆಯ ಪತನವೇ ಇದಕ್ಕೆ ಕಾರಣ. ಸಮಾಜದಲ್ಲಿ ನೈತಿಕತೆಯ ಪುನರುತ್ಥಾನ ಆಗಬೇಕಿದ್ದು ಇದರಲ್ಲಿ ಗುರುಪೀಠಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಸಚಿವ ಮಂಕಾಳ ವೈದ್ಯ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ, ಶಾಸಕ ಶಿವರಾಮ ಹೆಬ್ಬಾರ, ಅಶೋಕ ಹಾರ್ನಳ್ಳಿ ಮುಂತಾದವರು ಪಾಲ್ಗೊಂಡರು.

RELATED ARTICLES  ಗಟಾರಕ್ಕೆ ಉರುಳಿ ಬಿದ್ದ ಪೆಟ್ರೋಲ್ ಟ್ಯಾಂಕರ್

ಸೋಮವಾರ, ೧೯ರಂದು ಶ್ರೀಮಠದಲ್ಲಿ ಮಹಾರುದ್ರ ಜಪ, ಹವನ, ೩.೨೦ಲಕ್ಷ ಅಕ್ಷರಾಯುತ ಶ್ರೀಲಕ್ಷ್ಮೀನೃಸಿಂಹ ಮಂತ್ರ ಜಪ, ೨೦ರಂದು ಅಷ್ಟಶ್ರಾದ್ದ ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನ, ಲಕ್ಷ್ಮೀ ನೃಸಿಂಹಜಪ ನಡೆಯಲಿದೆ. ಫೆ.೨೧ರಂದು ಸಂನ್ಯಾಸ ಗ್ರಹಣ ಸಂಕಲ್ಪ, ಗಣಪತಿ ಪೂಜಾ, ನಾಂದಿಶ್ರಾದ್ಧ, ಮಾತೃಕಾಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿ ಹವನ, ವಿರಜಾ ಹೋಮ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಫೆ.೨೨ರಂದು ೧೧ ಯತಿಗಳ ಸಮ್ಮುಖದಲ್ಲಿ ಯೋಗ ಪಟ್ಟದ ಕಾರ್ಯಕ್ರಮ ನಡೆಯಲಿದೆ.
ಜಲಾಶಯಗಮನ, ಪ್ರೇಷೋಚ್ಚಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂ ಕಶೌಚ, ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀ ನೃಸಿಂಹ ಮಂತ್ರ ಹವನ ನಡೆಯಲಿದೆ‌.