ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಅವರು ಛತ್ತೀಸಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಜಿನೈಕ್ಯರಾಗಿದ್ದಾರೆ.
ವಿದ್ಯಾಸಾಗರ ಮಹಾರಾಜರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಹಾಗೂ ಮೂರು ದಿನಗಳ ಹಿಂದೆ ಸಮಾಧಿ ಪ್ರಕ್ರಿಯೆ ಅಂದರೆ ‘ಸಲ್ಲೇಖನ’ ವ್ರತ ಪ್ರಾರಂಭಿಸಿ ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಇದಾದ ಬಳಿಕ ಶನಿವಾರ ರಾತ್ರಿ 2:35ರ ಸುಮಾರಿಗೆ ಆಚಾರ್ಯರು ದೇಹ ತೊರೆದಿದ್ದಾರೆ.

ಜೈನ ಸಮುದಾಯದ ರತ್ನ ಎಂದು ಕರೆಯಲ್ಪಡುವ ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ವಿದ್ಯಾಸಾಗರ ಮಹಾರಾಜ ಅವರು 1946 ಅಕ್ಟೋಬರ್ 10 ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗ ಎಂಬಲ್ಲಿ ಜನಿಸಿದ್ದರು. ಅವರು ಆಚಾರ್ಯ ಜ್ಞಾನಸಾಗರ ಅವರ ಶಿಷ್ಯರಾಗಿದ್ದರು ಮತ್ತು ಅವರು ಸಮಾಧಿಯಾದಾಗ, ಅವರು ತಮ್ಮ ಆಚಾರ್ಯ ಹುದ್ದೆಯನ್ನು ಮುನಿ ವಿದ್ಯಾಸಾಗರ ಅವರಿಗೆ ಹಸ್ತಾಂತರಿಸಿದರು.

RELATED ARTICLES  ದಂಡ ತೆರು ನಗುನಗುತಾ

1968 ರಲ್ಲಿ ದಿಗಂಬರ ಸನ್ಯಾಸಿಯಾಗಿ ದೀಕ್ಷೆ ಪಡೆದ ಇವರು ನವೆಂಬರ್ 22, 1972 ರಂದು, ಮುನಿ ವಿದ್ಯಾಸಾಗರ ತಮ್ಮ 26 ನೇ ವಯಸ್ಸಿನಲ್ಲಿ ಆಚಾರ್ಯರಾದರು. ಅವರ ಕಠಿಣ ಜೀವನಶೈಲಿಯು ಉಪ್ಪು, ಸಕ್ಕರೆ, ಹಣ್ಣುಗಳು ಮತ್ತು ಇತರ ಕೆಲವು ಪದಾರ್ಥಗಳನ್ನು ತ್ಯಜಿಸುವುದನ್ನು ಒಳಗೊಂಡಿತ್ತು. ಹಿಂದಿ ಪ್ರಚಾರ, ಕೈಮಗ್ಗ ಮತ್ತು ಆಯುರ್ವೇದದಲ್ಲಿಯೂ ಇವರ ಪಾತ್ರವಿದೆ. ರಾಜಸ್ಥಾನದಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆದರು. ಬುಂದೇಲ್‌ಖಂಡದಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಸಂಸ್ಕೃತ ಮತ್ತು ಪ್ರಾಕೃತ, ಹಿಂದಿ, ಮರಾಠಿ ಮತ್ತು ಕನ್ನಡದಲ್ಲಿ ಪರಿಣತರಾಗಿದ್ದರು ಮತ್ತು ಹಿಂದಿ ಮತ್ತು ಸಂಸ್ಕೃತದಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ಹೇಗಿದೆ ಗೊತ್ತಾ ಇಂದಿನ ದಿನ: ನಿಮಗೆ ಅದೃಷ್ಟ ತರುವ ಸಂಖ್ಯೆ ಯಾವುದು ಗೊತ್ತಾ? ಇಲ್ಲಿದೆ ನೋಡಿ.