ಶಿರಸಿ : ಇಲ್ಲಿಯ ಯೂತ್ ಫಾರ್ ಸೇವಾ ಸಮಿತಿಯವರು ನಿರ್ಮಿಸಿದ ಮಾರಿಕಾಂಬಾ ವನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಗಿಡಗಂಟಿಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಟಿ. ಸಿ ಕೇಬಲ್ ತುಂಡಾಗಿ ಹೊತ್ತಿದ ಕಿಡಿಯಿಂದ ಉಂಟಾದ ಬೆಂಕಿಗೆ ಭಾನುವಾರ ಮಾರಿಕಾಂಬಾ ವನದ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ.

RELATED ARTICLES  ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ.

ಬೆಂಕಿಯ ರಬಸಕ್ಕೆ ಗಿಡಗಳು ಅರ್ಧ ಭಾಗ ಸುಟ್ಟು ಹೋಗಿದೆ. ಗಿಡಗಳಿಗೆ ನೀರು ಪೂರೈಸಲು ಹಾಕಿದ ಡ್ರಿಪ್ ಪೈಪ್ ಸುಟ್ಟು ಹೋಗಿದ್ದು ಸುಮಾರು 20, 000 ರೂಪಾಯಿಯಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 155 ಔಷಧ ಸಸ್ಯಗಳು ಸುಟ್ಟಿವೆ. ದಾನಿಗಳ ನೆರವು ಯಾಚಿಸಲಾಗಿದೆ.

RELATED ARTICLES  ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು.