ಕುಮಟಾ : ವಸತಿ ಶಾಲೆಗಳಲ್ಲಿ ಹಾಗೂ ಶಾಲೆಗಳ  ಬಾಗಿಲಲ್ಲಿ ಬರೆದ ಕುವೆಂಪುರವರು ರಚಿಸಿದ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬುದನ್ನು ಬದಲಾಯಿಸಿ ‘ಜ್ಞಾನ ದೇಗುಲವಿದು ಧೈರ್ಯದಿಂದ ಪ್ರಶ್ನಿಸು’ ಎಂಬ ಸರ್ಕಾರದ ಆದೇಶದ ವಿರುದ್ಧ ಬಿಜೆಪಿ ಮುಖಂಡ ಎಂ. ಜಿ ಭಟ್ಟ ಕಿಡಿ ಕಾರಿದ್ದಾರೆ.

ಭಾರತೀಯ ಸಂಸ್ಕೃತಿಯು ಇಡೀ ಜಗತ್ತಿನಲ್ಲಿಯೇ ವಿಶಿಷ್ಟವಾದ ಶ್ರೇಷ್ಠವಾದ ಸಂಸ್ಕೃತಿ. ಶಾಲೆಗಳೆಂದರೆ ದೇವಾಲಯಗಳಿದ್ದಂತೆ. ಅಲ್ಲಿ ನಾವು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ವರ್ತಿಸಬೇಕಾದದ್ದು ನಮ್ಮ ಧರ್ಮ. ಆದ್ದರಿಂದಲೇ ಕುವೆಂಪುರವರು ರಚಿಸಿದ ಅತ್ಯಂತ ಅರ್ಥಗರ್ಭಿತವಾದ ಘೋಷಣೆ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬುದನ್ನು ಎಲ್ಲಾ ಶಾಲೆಗಳಿಗೂ ಅಳವಡಿಸಲಾಗಿತ್ತು. ಆದರೆ ಸಂಸ್ಕೃತಿ ಹೀನ ಕಾಂಗ್ರೆಸ್ ಸರ್ಕಾರ ಅದನ್ನು ಬದಲಾಯಿಸಿದ್ದು ಕೇವಲ ನಮ್ಮ ಸಂಸ್ಕೃತಿಯ ಮೇಲೆ ಪ್ರಹಾರ ಅಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಮ್ಮ ಕನ್ನಡ ನಾಡಿನ ಹೆಮ್ಮೆ ಕುವೆಂಪುರವರಿಗೆ ಅಪಮಾನ ಮಾಡಿದಂತೆ ಆಗಿದೆ. ಇಂತಹ ಹೀನ ಕೃತ್ಯವನ್ನು ಇಡೀ ಸಮಾಜ ಒಂದಾಗಿ ವಿರೋಧಿಸಬೇಕಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಇಂತಹ ಬೇಜವಾಬ್ದಾರಿ ಕೆಲಸವನ್ನು ಸರಕಾರ ಮಾಡಬಾರದು. ಇಂತಹ ಹೀನ ಕೃತ್ಯ ಮರುಕಳಿಸದಲ್ಲಿ ಇಡೀ ಸಮಾಜ ಒಂದಾಗಿ ಹೋರಾಡುವ ದಿನಗಳು ಬರಬಹುದು ಎಂದು ಎಂ. ಜಿ ಭಟ್ಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES  ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು.