ಕುಮಟಾ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಹಾಗೂ ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಧಾರವಾಡದಲ್ಲಿ ಜರುಗಿದ ವಿಜ್ಞಾನ ಆವಿಷ್ಕಾರ ಮಾದರಿ ಹಾಗೂ ಮಕ್ಕಳಿಂದ ಕಲಾ ಅನಾವರಣ ಪ್ರದರ್ಶನದಲ್ಲಿ ತಾಲೂಕಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಕೃತಿಕಾ ರತನ ಗಾಂವಕರ ಹಾಗೂ ರಚನ ಸುರೇಂದ್ರ ನಾಯ್ಕ ಇವರು ಪ್ರದರ್ಶಿಸಿದ ‘ಹೀಟ್ ರಿಕವರಿ ಸಿಸ್ಟಮ್ ಟು ಎಲ್.ಪಿ.ಜಿ. ಸ್ಟೊವ್ ಎಂಬ ವಿಜ್ಞಾನ ಮಾದರಿಗೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ದೊರಕಿದೆ. ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.