ಕುಮಟಾ : ಇಲ್ಲಿನ ನೌಕರರ ಸಂಘದ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಮಟಾ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ಫೇ.೨೭ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಕರೆಕೊಡಲಾಯಿತು. 

ನೌಕರರ ಸಂಘದ ತಾಲೂಕಾಧ್ಯಕ್ಷ ರಘುನಾಥ ನಾಯ್ಕ ಮಾತನಾಡಿ ಸಂಘಟನೆಯ ಮಾರ್ಗದರ್ಶನದಲ್ಲಿ ಮುಂದಿನ ಯೋಜನೆ ಕೈಗೊಳ್ಳೋಣ. ಎಲ್ಲರೂ ಒಂದಾಗಿ ಸಮಾವೇಶದಲ್ಲಿ ಪಾಲ್ಗೊಳ್ಳೋಣ ಎಂದರು. ಸಂಘದ ಗೌರವಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ ಈ ಒಕ್ಕಟ್ಟು ಕೇವಲ ಸಮ್ಮೇಳನಕ್ಕೆ ಸೀಮಿತವಾಗಿರಬಾರದು. ಸಂದರ್ಭ ಬಂದರೆ ಮುಂದಿನ ಹೋರಾಟದಲ್ಲಿ ಕೂಡಾ ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು. ಎಂತಹ ಪರಿಸ್ಥಿತಿ ಎದುರಾದರೂ ಒಗ್ಗಟ್ಟಿನಿಂದಿರೋಣ ಎಂದರು. ವಿವಿಧ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು. 

RELATED ARTICLES  ಸಾರ್ವಭೌಮ ಗುರುಕುಲದಲ್ಲಿ ಸ್ಟೆಮ್ ಮಿನಿ ಲ್ಯಾಬ್ ಉದ್ಘಾಟನೆಪ್ರಯೋಗ ಸೃಜನಶೀಲತೆಗೆ ಸಹಕಾರಿ: ರಾಘವೇಶ್ವರ ಶ್ರೀ

ನೌಕರರ ಸಂಘದ ತಾಲೂಕಾಧ್ಯಕ್ಷರಾದ ರಘುನಾಥ ನಾಯ್ಕ, ನೌಕರರ ಸಂಘದ ಗೌರವಾಧ್ಯಕ್ಷರೂ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆದ ರವೀಂದ್ರ ಭಟ್ಟ ಸೂರಿ, ನೌಕರರ ಸಂಘದ ಉಪಾಧ್ಯಕ್ಷ ಎಮ್.ಎಮ್.ಹೆಗಡೆ, ಮಂಜುನಾಥ ನಾಯ್ಕ, ಭಾಗೀರಥಿ ನಾಯ್ಕ, ಪ್ರಧಾನ ಕಾರ್ಯದರ್ಶಿ ಗುರುದಾಸ ಮಹಾಲೆ, ಖಜಾಂಚಿ ಮುಕುಂದ ಮಡಿವಾಳ, ರಾಜ್ಯ ಪರಿಷತ್ ಸದಸ್ಯರೂ ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷರೂ ಆದ ಬಿ.ಜಿ.ನಾಯಕ, ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್.ಟಿ.ನಾಯಕ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಅನಿಲ ರೊಡ್ರಿಗೀಸ್, ಉಪಾಧ್ಯಕ್ಷರಾದ ಪಾಂಡುರಂಗ ವಾಗ್ರೇಕರ್ , ಸಂಘಟನಾ ಕಾರ್ಯದರ್ಶಿ ಆರ್.ಡಿ.ನಾಯ್ಕ, ಪ್ರಶಾಂತ ಗಾವಡಿ,  ಉದಯ ನಾಯ್ಕ, ಮುಖ್ಯಾಧ್ಯಾಪಕರ ಸಂಘದ ಕಾರ್ಯದರ್ಶಿ ಎಸ್.ಎಸ್.ಕೊರವರ್, ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಐ.ನಾಯ್ಕ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ ದೇಶಭಂಡಾರಿ, ಅರಣ್ಯ ಇಲಾಖೆಯ ಬಿ.ಎನ್.ಬಂಕಾಪುರ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

RELATED ARTICLES  ಎಣ್ಮಕಜೆ ವಲಯ ಸೇವಾ ವಿಭಾಗ ಪ್ರಧಾನ ಮನೆಯಲ್ಲಿ ಅಗ್ನಿ ದುರಂತ: ವಿಷಯ ತಿಳಿದು ಶ್ರೀ ಸಂಸ್ಥಾನದಿಂದ ಫಲ ಮಂತ್ರಾಕ್ಷತೆ ಹಾಗೂ ಸಾಂತ್ವನ ಸಂದೇಶ