ಕುಮಟಾ : ಗವ್ಯಚಿಕಿತ್ಸಕ ಡಾ. ರವಿ ಎನ್. ಅವರು ಬರೆದ, ಭಾರತೀ ಪ್ರಕಾಶನದವರು ಪ್ರಕಾಶಿಸಿದ ‘ಗವ್ಯಾಮೃತ’ ಪುಸ್ತಕವನ್ನು ಅಮೃತಧಾರಾ ಗೋಶಾಲೆ ಹೊಸಾಡದ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಲೇಖಕ ಡಾ. ರವಿ ಮಾತನಾಡಿ ಆಯುರ್ವೇದ ವೈದ್ಯಶಾಸ್ತ್ರವು ಬೆಳೆದುಬಂದ ರೀತಿಯನ್ನು ವಿವರಿಸುತ್ತಾ, ಆಯುರ್ವೇದ ವೈದ್ಯಶಾಸ್ತ್ರವು ಸುತ್ತಮುತ್ತಲು ಇರುವ ಪ್ರಕೃತಿಮಾತೆ ಕೊಟ್ಟ ಸಸ್ಯಜನ್ಯ ಹಾಗೂ ವಿವಿಧ ಪ್ರಾಣಿಜನ್ಯ ವಸ್ತುಗಳನ್ನು ಒಳಗೊಂಡಿದೆ. ಭಾರತೀಯ ಗೋವಂಶವು ನೀಡುವ ಹಾಲು, ಮೊಸರು, ತುಪ್ಪ, ಗೋಮಯ ಹಾಗೂ ಗೋಮೂತ್ರಗಳು ಪಂಚಗವ್ಯವೆಂದು ಕರೆಯಲ್ಪಟ್ಟು ಆಯುರ್ವೇದಶಾಸ್ತ್ರದ ಅವಿಭಾಜ್ಯ ಅಂಗವಾಗಿವೆ. ಭಾರತೀಯ ಗೋವಂಶದ ಪಂಚಗವ್ಯಗಳು ಅತಿವಿಶೇಷವಾದ ಔಷಧೀಯ ಗುಣಗಳು ಹೊಂದಿರುವುದನ್ನು ವೇದ ಕಾಲವು ಒಪ್ಪಿಕೊಂಡಿದ್ದಲ್ಲದೆ, ಆಧುನಿಕ ಕಾಲದಲ್ಲಿ ನಡೆದ ಹಲವಾರು ವೈಜ್ಞಾನಿಕ ಅನುಸಂಧಾನಗಳೂ ಒಪ್ಪಿಕೊಂಡಿವೆ. ಹೀಗಾಗಿ ಅದನ್ನು ಆಧರಿಸಿದ ಗ್ರಂಥ ಇದು ಎಂದು ಅಭಿಪ್ರಾಯಪಟ್ಟರು.

RELATED ARTICLES  ಸಾಧನೆ ಪಡೆಯಲು ಗುರುವಿನ ಬಲ, ಗುರಿ ಸಾಧನೆಯ ಛಲ ಇರಬೇಕು : ಡಾ. ಪ್ರಕಾಶ ನಾಯ್ಕ

ರಾಘವೇಶ್ವರ ಶ್ರೀಗಳು ಇಂತಹ ಗ್ರಂಥಗಳು ಮಾನವನ ಆರೋಗ್ಯಯುತ ಜೀವನಕ್ಕೆ ದಾರಿದೀಪ ಎಂದು ಬಣ್ಣಿಸಿದರು. ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಮುರಳೀಧರ ಪ್ರಭು, ಗೌರವಧ್ಯಕ್ಷೆ ಭಾರತೀ ಪಾಟೀಲ್ ಹಾಗೂ ಹೊಸಾಡು ಗೋಶಾಲೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 

RELATED ARTICLES  ಮಿನಿ ಬಸ್ ತಡೆದು ಪ್ರತಿಭಟನೆ : ಖಡಕ್ ಎಚ್ಚರಿಕೆ ನೀಡಿದ ಶಾಸಕ ದಿನಕರ‌ ಶೆಟ್ಟಿ.

ಇದೇ ಸಂದರ್ಭದಲ್ಲಿ ಶ್ರೀಭಾರತೀ ಪ್ರಕಾಶನ ಪ್ರಕಟಿಸಿರುವ ಎರಡನೇ ಮುದ್ರಣದ ಪುಸ್ತಕದ ಪ್ರತಿಗಳಿಗಾಗಿ ಗಿರಿನಗರದ ಶ್ರೀಪುಸ್ತಕಮ್ 9591542454 ಸoಪರ್ಕಿಸಬಹುದು ಎಂದೂ ಶ್ರೀಭಾರತಿ ಸಂಸ್ಥೆ ತಿಳಿಸಿದೆ.