ಚಲನಚಿತ್ರ ನಿರ್ಮಾಪಕರು ಭಾರತೀಯ ಜನತಾಪಾರ್ಟಿ ಉತ್ತರಕನ್ನಡ ಇದರ ಉಪಾಧ್ಯಕ್ಷರಾದ ಸುಬ್ರಾಯ ಹರಿಶ್ವಂದ್ರ ವಾಳ್ಕೆಯವರು ಇಂದು ಹೊಸಾಡ ಗೋಶಾಲೆಯ ಆಲೆಮನೆ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀ ಸಂಸ್ಥಾನ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದರ್ಶನಪಡೆದು ಕಳೆದ ಕೆಲವು ವರ್ಷಗಳಹಿಂದೆ ಗೋಶಾಲೆಗೆ ಧನ ಸಹಾಯ ಮಾಡುವ ವಾಗ್ದಾನ ಮಾಡುವುದಾಗಿ ಘೋಷಣೆ ಮಾಡಿ ಬಳಿಕ ಅದನ್ನು ಮರೆತ ಬಗ್ಗೆ ಕ್ಷಮೆ ಯಾಚಿಸಿ ಗುರುಗಳ ಸಮ್ಮುಖ ಅದನ್ನು ಗೋಶಾಲೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಗುರುಗಳ ಎದುರು ಬಿನ್ನವಿಸಿಕೊಂಡ ಅವರು ಅಕ್ಷರಶಹ ತಾನು ಅದನ್ನು ಮರೆತಿದ್ದು..ಇಷ್ಟು ವಿಳಂಬ ಆಗಲು ತಾನು ಅದನ್ನು ಒಪ್ಪಿಸಲು ಅಪಾತ್ರನಾಗಿದ್ದೆನೋ ಏನೋ ಯಾವರೀತಿ ಕಾದು ಕಾದು ಶಬರಿ ರಾಮಾನುಗ್ರಹ ಪಡೆದಳೋ ಕಲ್ಲಾದ ಅಹಲ್ಯೆ ಎಷ್ಟೋ ವರ್ಷಗಳ ಬಳಿಕ ರಾಮ ಪಾದ ಸ್ಪರ್ಷದಿಂದ ಹೆಣ್ಣಾದಳೋ ತಾನೂ ಇಂದು ಅಂತಹ ಭಾವವನ್ನು ಹೊಂದಿದ್ದೇನೆ.
ಶ್ರೀ ಸಂಸ್ಥಾನದ ಸಮುಖದಲ್ಲಿ ಇದನ್ನು ಸಮರ್ಪಿಸಿ ಶ್ರೀಗಳ ಆಶೀರ್ವಾದ ಪಡೆಯುವ ಈ ಕ್ಷಣ ತನ್ನ ಭಾಗ್ಯ ಎಂದು ಭಾವುಕರಾಗಿ ನುಡಿದರು. ತನಗೂ‌ ಗೋಸೇವೆಯ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬಯಕೆ ಇದ್ದು ಅವಕಾಶ ನೀಡಬೇಕೆಂದು ಪ್ರಾರ್ಥಿಸಿದರು. ಬಳಿಕ ನಡೆದ ಆಶೀರ್ವಚನದಲ್ಲಿ ಶ್ರೀಗಳು ವಾಳ್ಕೆ ಕುಟುಂಬಕ್ಕೆ ಅನುಗ್ರಹಿಸಿ. ಗೋಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಉಪದೇಶಿಸಿದರು.

RELATED ARTICLES  ಗಾಂಧಿ ಕುಟುಂಬದ ಬಗ್ಗೆ ಖಡಕ್ ಮಾತನಾಡಿದ ಅನಂತಕುಮಾರ್ ಹೆಗಡೆ.