ಶಿರಸಿ: ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಅವರ ನಿಧನದ ಹಿನ್ನೆಲೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರು ಬುಧವಾರ ಶಾಂತಾರಾಮ ಹೆಗಡೆ ಅವರ ಮಗ ಶಶಾಂಕ ಹೆಗಡೆ ಅವರನ್ನು ಶೀಗೇಹಳ್ಳಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶಾಂತಾರಾಮ ಹೆಗಡೆ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಅವರು ಶಾಂತಾರಾಮ ಹೆಗಡೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿದರು.

RELATED ARTICLES  ಮಾರಿಕಾಂಬಾ ವನದಲ್ಲಿ ಆಕಸ್ಮಿಕವಾಗಿ ಬೆಂಕಿ

ಈ ಸಂದರ್ಭದಲ್ಲಿ ಶಾಂತಾರಾಮ ಹಗಡೆ ಅವರ ಪತ್ನಿ ಸರಸ್ವತಿ ಹೆಗಡೆ, ಕುಟುಂಬದ ಸದಸ್ಯರು ಹಾಗೂ ಶಿರಸಿ ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಒಳಗೊಂಡು ಇತರರಿದ್ದರು.

RELATED ARTICLES  ರಾಜಕೀಯಕ್ಕೆ‌ ಮರಳುವಂತೆ ಅನಂತ ಕುಮಾರ್ ಹೆಗಡೆಗೆ ಒತ್ತಾಯಿಸಿದ ಅಭಿಮಾನಿಗಳು.