ಸಿದ್ದಾಪುರ: ತಾಲೂಕಿನಲ್ಲಿ ಕೆಎಫ್‌ಡಿ(ಮಂಗನ ಕಾಯಿಲೆ)ಗೆ ಈ ವರ್ಷ ಮೊದಲ ಬಲಿ ಆಗಿದ್ದು ಜನರಲ್ಲಿ ಆತಂಕ ಉಂಟಾಗಿದೆ. ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜಿಡ್ಡಿಯ 65 ವರ್ಷದ ಮಹಿಳೆಗೆ ಮಂಗನ ಕಾಯಿಲೆಯ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾಳೆ. ರೋಗದ ಲಕ್ಷಣ ಕಂಡುಬಂದಾಗ ಪ್ರಾರಂಭದಲ್ಲಿ ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಂತರ ಶಿವಮೊಗ್ಗ, ಮಣಿಪಾಲ್‌ನಲ್ಲಿ ಹಾಗೂ ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು.

RELATED ARTICLES  ಬಯಸ್ಸಿದ್ದನ್ನು ಕೊಡುವ ದೆವ್ವ ಖರೀದಿಸಲು ಹೋದ ಭೂಪ; ಕೊನೆಗೆ ಅಲ್ಲಿ ಆದದ್ದೇನು?

ಮಂಗನ ಕಾಯಿಲೆಯ ಹಾಟ್ ಸ್ಪಾಟ್ ಆಗಿ ಸಿದ್ದಾಪುರ ತಾಲೂಕು ಕಾಣಿಸಿಕೊಂಡಿದ್ದು ತಾಲೂಕಿನಲ್ಲಿ ಇಲ್ಲಿಯವರೆಗೆ 43 ಜನರಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದ್ದು ಅವರಲ್ಲಿ ಒಬ್ಬಳು ಸಾವನ್ನಪ್ಪಿದ್ದರಿಂದ ಭಯದ ವಾತಾವರಣ ಉಂಟಾಗಿದೆ. ಮಂಗನ ಕಾಯಿಲೆ ಕುರಿತು ಆರೋಗ್ಯ ಇಲಾಖೆ ಮತ್ತಷ್ಟು ಜಾಗೃತಿವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೇವಲ ಕಾಟಾಚಾರದ ಸಭೆ ನಡೆಸಿದರೆ ಏನೂ ಪ್ರಯೋಜನ ಇಲ್ಲ. ರೋಗದ ಲಕ್ಷಣ ಕಂಡು ಬಂದ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

RELATED ARTICLES  ಕುವೆಂಪು ನಾಡಗೀತೆಗೆ ಸಿ ಅಶ್ವತ್ ಸಂಯೋಜನೆ ಅತ್ಯಂತ ಹೆಚ್ವು ಸೂಕ್ತ - ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ