ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆಯಾಗಿದೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದ್ದು ಇದೊಂದು ಶುದ್ಧ ಸುಳ್ಳು ಸುದ್ದಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಕರಾವಳಿಯ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಮೂಲದ ಬೋಟ್ ಪತ್ತೆಯಾಗಿ, ಮಂಗಳೂರಿನ ಮೀನುಗಾರರು ಆ ಬೋಟ್‌ನ ಫೋಟೊ, ವಿಡಿಯೋ ಸೆರೆಹಿಡಿದಿದ್ದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬೆಲ್ಲಾ ಮಾಹಿತಿ ನಿನ್ನೆ ಹರಿದಾಡುತ್ತಿತ್ತು.

BVKVS ಹೆಸರಿನ ಬೋಟ್ ಇದಾಗಿದ್ದು, ಚೀನಾದ ಬಾವುಟವನ್ನು ಬೋಟ್‌ನಲ್ಲಿ ಹಾರಾಡುತ್ತಿದೆ. ಕುಮಟಾ‌‌ ಸಮೀಪ ಆಳ ಸಮುದ್ರದಲ್ಲಿ ಬೇರೊಂದು ಬೋಟನಲ್ಲಿ ಮೀನುಗಾರಿಕೆ ಮಾಡುತ್ತಿದ್ದ‌ ಮಂಗಳೂರಿನ ಮೀನುಗಾರರು ಚೀನಾ ಬೋಟ್ ಎಂಬ ಶಂಕೆಯಲ್ಲಿ ಫೋಟೋ ತೆಗೆದಿದ್ದಾರೆ. ಚೀನಾ ಬೋಟ್‌ ಕಾಣಿಸಿಕೊಂಡಿರುವ ಬಗ್ಗೆ, ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯ ಗಮನಕ್ಕೆ ತಂದಿದ್ದಾರೆ ಎಂದು ವರದಿಯಾಗಿತ್ತು.

RELATED ARTICLES  ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿಗಳ ಇನ್ಶುರೆನ್ಸ್ ಸೌಲಭ್ಯ, ಸನ್ಮಾನ ಕಾರ್ಯಕ್ರಮ ಮತ್ತು ಔತಣಕೂಟ : ಅನಂತಮೂರ್ತಿ ಹೆಗಡೆ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರಾವಳಿ ಕಾವಲುಪಡೆಯ ಅಧಿಕಾರಿಗಳು ಅಂತಹ ಘಟನೆ ಏನು ನಡೆದಿಲ್ಲ. ಹೊನ್ನಾವರದ ಮೀನುಗಾರರು ವಿಡಿಯೋ ಮಾಡಿದ್ದು ಅವರಿಂದ ಕುಲಂಕುಶವಾಗಿ ಮಾಹಿತಿ ಪಡೆಯಲಾಗಿದೆ. ಈ ಮೀನುಗಾರರು ತಮ್ಮ ವ್ಯಾಪ್ತಿಯ ಹೊರ ಹೋಗಿದ್ದು 200 ನಾಟಿಕಲ್ ಮೈಲಿ ಗಿಂತ ಹೆಚ್ಚಿನ ದೂರ ಸಾಗಿದ್ದಾರೆ. ಇದು ಯಾವುದೇ ನಿರ್ಬಂಧ ವಿಲ್ಲದ ಸ್ಥಳವಾಗಿದ್ದು ಇಲ್ಲಿ ಯಾವುದೇ ದೇಶದ ಯಾವುದೇ ರೀತಿಯ ಬೋಟ್ಗಳು ಓಡಾಡಬಹುದಾಗಿದೆ. ಯಾರು ಬೇಕಾದರೂ ಓಡಾಡಬಹುದಾದ ಸ್ಥಳದಲ್ಲಿ ಮಾಡಿದ ವಿಡಿಯೋ ಇದಾಗಿದ್ದು ಈ ಬಗ್ಗೆ ಗೊಂದಲ ಪಡುವ ಅವಶ್ಯಕತೆ ಇಲ್ಲ. ಅದಲ್ಲದೆ ಯಾವುದೇ ರೀತಿಯ ರಕ್ಷಣಾ ವ್ಯವಸ್ಥೆಯ ಉಲ್ಲಂಘನೆ ಆಗಲಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ಸಮಸ್ಯೆ ಆಗುವ ಘಟನೆಗಳಾಗಲಿ ನಡೆದಿಲ್ಲ ಎಂದು ಪಿ.ಎಸ್.ಐ ಅನೂಪ ನಾಯಕ ಮಾಹಿತಿ ನೀಡಿದ್ದಾರೆ.

RELATED ARTICLES  ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮ : ತಬಲಾ ಗುರು ಶೇಷಾದ್ರಿ ಅಯ್ಯಂಗಾರ್ ಗೆ ಸನ್ಮಾನ : ಸಂಘಟಕರ ಕಾರ್ಯದ ಬಗ್ಗೆ ಮೆಚ್ಚುಗೆ.

ಮೀನುಗಾರರೂ ಇದನ್ನು ಕುಮಟಾದಿಂದ ಅಂದಾಜು 200ಕಿಮೀ ದೂರದ ಆಳ ಸಮುದ್ರದಲ್ಲಿ ಸೆರೆಹಿಡಿಯಲಾಗಿದೆ. ಚೀನಾ ಬೋಟಿನವರು ರಾತ್ರಿ ವೇಳೆ ನಿಷೇಧಿತ ಲೈಟ್ ಫಿಶಿಂಗನ್ನೂ ನಡೆಸುತ್ತಿದ್ದರು ಎಂದು ತಿಳಿಸಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು ಯಾವುದೇ ರೀತಿಯ ಸಮಸ್ಯೆಯಾಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.