ಕುಮಟಾ : ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಸಂಘಟನೆ ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಿಧನರಾದ ನಾಡಿನ ಹಿರಿಯ ಸಾಹಿತಿ ವಿಷ್ಣು ನಾಯ್ಕ ಅವರ ಗೌರವಾರ್ಥ ಹಮ್ಮಿಕೊಂಡ ‘ನೆನಪಿನೊಂದಿಗೆ ವಿಷ್ಣು ನಾಯ್ಕ’ ಕಾರ್ಯಕ್ರಮವನ್ನು ಕಥೆಗಾರ ಶ್ರೀಧರ ಬಳಗಾರ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಪರಂಪರೆ ನಮ್ಮ ಹಿಂದೆ ನೆಲೆ ನಿಂತಾಗ ಮತ್ತು ಫಲವತ್ತಾದ ಪರಿಸರದ ಸ್ಪರ್ಷದಿಂದ ಓರ್ವ ಬರಹಗಾರ ಹುಟ್ಟುತ್ತಾನೆ. ವಿಷ್ಣು ನಾಯ್ಕ ಹೀಗೆಯೇ ರೂಪುಗೊಂಡವರು. ಅವರು ತಮ್ಮ ಮನೆ ಅಂಗಳವನ್ನೇ ಸಾಹಿತ್ಯದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಹೊಸ ಹೊಸ ಸಾಧ್ಯತೆಯತ್ತ ಹೊರಳಿದರು’ ಎಂದರು. ‘ತೀರಿ ಹೋದವರನ್ನು ತಿರುಗಿ ನೆನಪಿಸದೇ ಇದ್ದರೆ ತೀರಿಹೋದವರನ್ನು ಮತ್ತೊಮ್ಮೆ ಸಾಯಿಸಿದ ಹಾಗೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣ ಎಂದರು.

RELATED ARTICLES  7 ರ‍್ಯಾಂಕುಗಳನ್ನು ಪಡೆದಿದ್ದ ಸಿ.ವಿ.ಎಸ್.ಕೆ ಪ್ರೌಢಶಾಲೆಗೆ, ಮರುಮೌಲ್ಯಮಾಪನದಿಂದಾಗಿ ಇನ್ನೂ 5 ರ‍್ಯಾಂಕುಗಳ ಸೇರ್ಪಡೆ.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಂಕೋಲಾ ಪಿ.ಎಂ.ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ, ಕವಿ ಫಾಲ್ಗುಣ ಗೌಡ, ‘ಆರು ದಶಕಗಳ ಕಾಲ ಸಾಹಿತ್ಯ, ಸಂಘಟನೆ, ಪ್ರಕಾಶನ, ರೈತ ಚಳುವಳಿ ಇವೆಲ್ಲ ವಿಷ್ಣು ನಾಯ್ಕ ಅವರ ಬದುಕಿನ ಪದರುಗಳು. ಅವರ ಸಾಧನೆಯ ಹಿಂದೆ ಮಹಾ ಆದರ್ಶಗಳಿವೆ. ದಿನಕರ ದೇಸಾಯಿ ಮತ್ತು ಗಿರಿ ಪಿಕಳೆ ಅವಒಳಗಿನ ತೀಕ್ಷ್ಣ ಒಳನೋಟಗಳನ್ನು ದಕ್ಕಿಸಿಕೊಂಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ವಿಷ್ಣು ನಾಯ್ಕ ಮತ್ತು ರಾಘವೇಂದ್ರ ಪ್ರಕಾಶನದ ಆಶಯಗಳನ್ನು ‘ಹಣತೆ’ ಮುಂದುವರೆಸಲು ಪ್ರಯತ್ನಿಸುತ್ತದೆ ಎಂದರು.

RELATED ARTICLES  ಸಹಸ್ರಾರು ಭಕ್ತರ ಆರಾಧ್ಯ ಕ್ಷೇತ್ರ ಬಾಡದ ಕಾಂಚಿಕಾಂಬಾ ಸನ್ನಿಧಿಯಲ್ಲಿ ನವರಾತ್ರಿ ವೈಭವ : ನವದಿನ ಪೂಜೆ ಪುನಸ್ಕಾರ

ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರ‍್ಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿವೃಂದ, ಕುಮಟಾ ರೋಟರಿ ಅಧ್ಯಕ್ಷ ಎನ್.ಆರ್.ಗಜು, ಕವಿ ಗಣಪತಿ ಹೆಗಡೆ ಕೊಂಡದಕುಳಿ ಮುಂತಾದವರು ಇದ್ದರು

‘ಹಣತೆ’ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಉದಯ ಮಡಿವಾಳ ಸ್ವಾಗತಿಸಿದರು. ಬಿಇಡಿ ವಿದ್ಯಾರ್ಥಿ ಪ್ರದೀಪ ಮರಾಠೆ, ವಿಷ್ಣು ನಾಯ್ಕರ ರಾಘವೇಂದ್ರ ಪ್ರಕಾಶನದ ಆಶಯ ಗೀತೆ ಹಾಡಿದರು. ಕಾಲೇಜಿನ ಉಪನ್ಯಾಸಕ ಸುಬ್ರಹ್ಮಣ್ಯ ಭಟ್ಟ ವಂದಿಸಿದರು. ವಿದ್ಯಾರ್ಥಿನಿ ನಾಗಶ್ರೀ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.