ಕುಮಟ: ಪ್ರಧಾನಿ ನರೇಂದ್ರ ಮೋದಿಯವರನ್ನು ಅವಾಚ್ಯ ಶಬ್ದದಿಂದ ನಿಂದಿಸಿರುವ ಕಾಂಗ್ರೇಸ್ ನಾಯಕ ರೋಷನ್ ಬೇಗ್ ವಿರುದ್ದ ಕುಮಟ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕುಮಟದ ಹೆಗಡೆ ಸರ್ಕಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ರೋಷನ್ ಬೇಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ರು.

RELATED ARTICLES  ಇನ್ನೆರಡು ದಿನ ಮಳೆ : ಕರಾವಳಿಯಲ್ಲಿ ಅಲರ್ಟ.

ತಾಲೂಕಿನ ಹೆಗಡೆ ಕ್ರಾಸ್ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರೋಷನ್ ಬೇಗ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಅವರನ್ನು ಕೂಡಲೆ ಪಕ್ಷದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ರು. ಪ್ರತಿಭಟನೆಯಲ್ಲಿ ಸರಕಾರದ ವಿರುದ್ದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ಘೋಷಣೆ ಕೂಗಿ ಅವಾಚ್ಯ ಶಬ್ದದಿಂದ ನಿಂದಿಸಿದ ರೋಷನ್ ಬೇಗ್ ಗೆ ಬಿಜೆಪಿಗರು ಎಚ್ಚರಿಕೆ ನೀಡಿದರು.

RELATED ARTICLES  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನಿಚ್ಚಲಮಕ್ಕಿ ವೆಂಕಟರಮಣ ದೇವಳದ ಅರ್ಚಕ

ಈ ಸಂರ್ಭದಲ್ಲಿ ಬಿಜೆಪಿ ಮುಖಂಡರಾದ ಸುರಜ್ ನಾಯ್ಕ ಸೋನಿ,ಕುಮಾರ ಮಾರ್ಕಾಂಡೇಯ,ನಾಗರಾಜ ನಾಯಕ ತೊರ್ಕೆ, ವೆಂಕಟರಮಣ ಹೆಗಡೆ,ಎಮ್ ಜಿ ಭಟ್,ಜಿ.ಜಿ ಹೆಗಡೆ ಸೇರಿದ್ದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.