ಯುವಾ ಬ್ರಿಗೇಡ್ ಕುಮಟಾ ವತಿಯಿಂದ ನಿನ್ನೆ ಎರಡನೇ ವರ್ಷದ ಅಘನಾಶಿನಿ ಆರತಿ ಕಾರ್ಯಕ್ರಮ ಸುಮಾರು 1500ಕ್ಕೂ ಹೆಚ್ಚು ಜನರ ನಡುವೆ ಅತ್ಯಂತ ಅರ್ಥಪೂರ್ಣವಾಗಿ, ಸುಂದರವಾಗಿ, ಭಕ್ತಿಭಾವಗಳಿಂದ ಅಘನಾಶಿನಿ ಬಸ್ ನಿಲ್ದಾಣದ ಹತ್ತಿರ ನಡೆಯಿತು. ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥಶ್ರೀಪಾದ ವಡೇರ್ ಸ್ವಾಮೀಜಿಯವರು ಮಾತನಾಡಿ ವೇದಕಾಲಗಳಲ್ಲಿಯೂ ನದಿಗಳ ಮಹತ್ವವನ್ನು ತಿಳಿಸಿದ್ದು ಜನರ ಜೀವನವನ್ನು ರೂಪಿಸಿದೆ. ಇಂತಹ ಆರತಿ ಪ್ರತಿವರ್ಷ ನಡೆಯಬೇಕು ಹಾಗೂ ನದಿಗಳು ಸ್ವಚ್ಚಂದವಾಗಿ ಹರಿಯಬೇಕು ಎಂದರಲ್ಲದೇ, ಬಂದಂತ ಜನರನ್ನು ಅಶೀರ್ವದಿಸಿದರು.
ಯುವಾ ಬ್ರಿಗೇಡ್ ನ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಅಘನಾಶಿನಿ ನದಿಯ ವೈಭವವನ್ನು ತೆರೆದಿಟ್ಟರು, ಪ್ರತಿಯೊಬ್ಬರ ಹುಟ್ಟು ಹಾಗೂ ಸಾವು ನೋಡಿರುವ ಒಬ್ಬರೇ ಒಬ್ಬರು ಅಂದರೆ ಅದು ನದಿಗಳು ಮಾತ್ರ ಇಂತಹ ನದಿಗಳ ಸ್ವಚ್ಚಮಾಡಿ ಅದಕ್ಕೆ ಆರತಿ ಮಾಡುವ ಹಬ್ಬ ಯುವಾ ಬ್ರಿಗೇಡ್ ಮಾಡುತ್ತಾ ಬಂದಿದೆ. ಹಿಂದಿನ ವರ್ಷವೂ ಅಘನಾಶಿನಿಗೆ ಆರತಿ ಕಾರ್ಯ ನಡೆದಿದ್ದು ಇಂದು ನಡೆದಿದೆ ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ಮಹೇಶ್ ಮಾಸ್ತಿ ಹರಿಕಾಂತ ಯುವಾ ಬ್ರಿಗೇಡ್ ಬಗ್ಗೆ ತಿಳಿದಿದ್ದು ಸೈನಿಕರು ನಿವೃತ್ತಿಯಾದಾಗ ಅವರನ್ನು ಸ್ವಾಗತಿಸುವ ಕಾರ್ಯಕ್ರಮದಿಂದ ಇಂದು ಎಲ್ಲರ ಮನೆ ಹಾಗೂ ಮನದ ಮಾತಾಗಿದೆ ಎಂದು ಯುವಾ ಬ್ರಿಗೇಡ್ ಕಾರ್ಯವನ್ನು ಶ್ಲಾಘಿಸಿದರು. ಅಘನಾಶಿನಿ ಬಗ್ಗೆ ಹಾಗೂ ನದಿಪಾತ್ರದ ಜನರ ಬಗ್ಗೆ ಊರಿನ ದಿವಾಕರ ಅಘನಾಶಿನಿಯವರು ಮಾತಾಡಿದರು.
ಈ ಸಂದರ್ಭದಲ್ಲಿ ಅಘನಾಶಿನಿ ಊರಿನ ಮೂವರು ಕಲಾ ಪ್ರೇಮಿಗಳನ್ನು ಹಾಗೂ 7 ಜನ ಶಿಲ್ಪಿಕಾರರನ್ನು ಸನ್ಮಾನಿಸಲಾಯಿತು. ಯುವಾ ಬ್ರಿಗೇಡ್ ಕುಮಟಾ ತಂಡದ ಸದಸ್ಯರುಗಳಾದ ಸಚೀನ ಭಂಡಾರಿ, ಮಂಜುಗೌಡ ಗೌಡ, ಚಿದಂಬರ ಅಂಬಿಗ, ಯಮುನಾ ಅಂಬಿಗ, ಜ್ಯೋತಿ ನಾಯ್ಕ ಇವರು ಶುಭ್ರವಸ್ತ್ರಗಳನ್ನು ತೊಟ್ಟು ಅಘನಾಶಿನಿ ಆರತಿಯನ್ನು ನೆರವೇರಿಸಿದರು.
ಅಘನಾಸಿನಿ ಊರಿನ ಜನ ಹಾಗೂ ಸ್ವಾಮೀಜಿಗಳ ಭಕ್ತವೃಂದ ಮತ್ತು ಯುವಾ ಬ್ರಿಗೇಡ್ ಹಿತೈಷಿಗಳು ಈ ಆರತಿಕಾರ್ಯಕ್ರಮವನ್ನು ಕಣ್ಣುತುಂಬಿಕೊಂಡರು.