ಹೊನ್ನಾವರ: ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾದ ಎಸ್.ಡಿ.ಎಂ. ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಡಾ.ರೇಣುಕಾದೇವಿ ಗೋಳಿಕಟ್ಟೆ ಅವರು ಅಧಿಕಾರ ಸ್ವೀಕರಿಸಿದರು.

ಡಾ.ರೇಣುಕಾದೇವಿ ಮೂಲತಃ ಅಂಕೋಲಾ ತಾಲೂಕಿನ ಅಗ್ರಗೋಣದವರಾಗಿದ್ದು, ತಮ್ಮ ಶಿಕ್ಷಣವನ್ನು ಅಂಕೋಲಾದ ಜಿ.ಸಿ. ಕಾಲೇಜಿನಲ್ಲಿ ಪೂರೈಸಿದ್ದಾರೆ. ಇವರ ಪತಿ ಶಾಂತಾರಾಮ ನಾಯಕ ಭಾವಿಕೇರಿಯವರಾಗಿದ್ದು, ಐ.ಟಿ.ಐ. ಕಾಲೇಜು ಯಲ್ಲಾಪುರದಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ.

RELATED ARTICLES  ಮರಳು ಲಾರಿ ಹರಿದು‌ ಸಾವು.

2002 ರಲ್ಲಿ ಕ.ವಿ.ವಿ. ಧಾರವಾಡದಿಂದ ಪ್ರಾಣಿಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ.ಪದವಿಯನ್ನು ಪಡೆದಿರುವ ಇವರನ್ನು ಸೇವಾಹಿರಿತನದ ಆಧಾರದ ಮೇಲೆ ಎಂ. ಪಿ. ಇ. ಸಂಸ್ಥೆಯ ಆಡಳಿತ ಮಂಡಳಿಯು ಪ್ರಾಚಾರ್ಯರನ್ನಾಗಿ ನೇಮಿಸಿದೆ. ಅವರು ಸೋಮವಾರದಂದು ಅಧಿಕಾರ ಸ್ವೀಕರಿಸಿದರು.ನೂತನ ಪ್ರಾಚಾರ್ಯರಿಗೆ ಆಡಳಿತ ಮಂಡಳಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ಗ್ಯಾಸ್ ಟ್ಯಾಂಕರ್ ಪಲ್ಟಿ, ಕೆಲಕಾಲ ಭಯದ ವಾತಾವರಣ.