ಯಲ್ಲಾಪುರ : ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು‌. ಇಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮಾತನಾಡಿದ ಅವರು ಬೆಳಿಗ್ಗೆ ಸ್ವಲ್ಪ ಆರೋಗ್ಯ ಸರಿ ಇರಲಿಲ್ಲ ಹೋಗಬೇಕು ಅಂತಾ ಅನ್ಕೊಂಡಿದ್ದೆ ,ಡಾಕ್ಟರ್ ಸಲಹೆ ಮೇರೆಗೆ 6 ಗಂಟೆಗೆ ಹೊರ ಬರಬೇಕಾಯ್ತು, ಮತಕೇಂದ್ರಕ್ಕೆ ಹೋಗಿ ಬೇಕಾದ್ರೆ ಅಡ್ಡ ಮತದಾನ ಮಾಡಬಹುದಿತ್ತು,ಮತಕೇಂದ್ರಕ್ಕೆ ಹೋಗಿ ಮತದಾನ ಮಾಡದೇ ಬರಬಹುದಾಗಿತ್ತು.

RELATED ARTICLES  ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮ ಡಿ.16 ರಂದು

ನಾನು ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ ನಾನು ಯಾರಿಗೂ ಹೆದರಿ ಮತದಾನಕ್ಕೆ ಹೋಗಿಲ್ಲ ಅನ್ನೊದು ತಪ್ಪು. ನಾನು ಯಾರಿಗೂ ವಾರ್ನಿಂಗ್ ಕೊಡುವ ಉದ್ದೇಶದಿಂದ ಮತದಾನ ಹೊಗದೆ ಇರುವುದು ತಪ್ಪು, ನನಗೆ ನನ್ನದೇ ಆದ ಅಸಮಧಾನ ಇರುವುದು ನಿಜ ಅದು ಜಿಲ್ಲಾಮಟ್ಟದಲ್ಲಿ ಅಸಮಧಾನ ಇರುವುದು.

RELATED ARTICLES  ಕಾಡುಹಂದಿ ಬೇಟೆಯಾಡಿದ ಆರೋಪಿ ಅರೆಸ್ಟ್

ಕೇಂದ್ರ ಮತ್ತು ರಾಜ್ಯದ ಮುಖಂಡರ ಮೇಲೆ ಅಸಮಧಾನ ಇಲ್ಲ. ಸಮಸ್ಯೆ ಇರುವುದು ಜಿಲ್ಲಾ ಮಟ್ಟದ ನಾಯಕರಿಂದ ಮಾತ್ರ. ಯಾರು ಅಡ್ಡಗಾಲು ಹಾಕುತಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಕೊಡಲಿದೆ ಎಂದರು.