ಕುಮಟಾ : ನಾಡಿನ ಅಗ್ರಗಣ್ಯ ಸಾಂಸ್ಕೃತಿಕ ಸಂಸ್ಥೆ, ಇಲ್ಲಿನ ಸದಭಿರುಚಿಯ ಸಾಂಸ್ಕೃತಿಕ ಸಂಗಮ ‘ಸೌರಭ’ ಕ್ಕೆ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ತರಂಗ ಸಂಸ್ಥೆಯ ಸಂಸ್ಥಾಪಕ, ಸಾಂಸ್ಕೃತಿಕ ಆಸಕ್ತ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಶ್ರೀಕಾಂತ ಭಟ್ಟ ತುಂಬಲೇಮಠ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಶಿಕ್ಷಣ ತಜ್ಞ, ಸಾಂಸ್ಕೃತಿಕ ಸಂಯೋಜಕ, ನಿರೂಪಕ, ನಿವೃತ್ತ ಪ್ರಾಚಾರ್ಯ ಅರುಣ ಹೆಗಡೆ, ಮಾನೀರು ಅವರು ಪ್ರಧಾನ ಕಾರ್ಯದರ್ಶಿಯಾಗಿ  ಆಯ್ಕೆಯಾಗಿದ್ದಾರೆ. ಮತ್ತು ಈ ವರ್ಷ  ಸೌರಭದ ರಜತ ಮಹೋತ್ಸವದ ಆಚರಣೆ ಹಮ್ಮಿಕೊಳ್ಳಲಾಗುವದು ಎಂದು ಸೌರಭದ ಪ್ರಕಟಣೆ ತಿಳಿಸಿದೆ.

1996 ರಲ್ಲಿ ಆರಂಭವಾದ ಸೌರಭ ಗುಣಾತ್ಮಕ ಕಾರ್ಯಕ್ರಮಗಳ  ಮಹಾ ಅಲೆಯನ್ನೇ ಹುಟ್ಟು ಹಾಕಿ ನಾಡಿನಾದ್ಯಂತ ಸಾಂಸ್ಕೃತಿಕ ಆಂದೋಲನವನ್ನೇ ಮಾಡಿತ್ತು. ಉದಯೋನ್ಮುಖರಿಗೂ  ಅವಕಾಶ, ಸಾಧಕರಿಗೂ ಸವಾಲು, ಸಮಯಪ್ರಜ್ಞೆಯ ಹಿತವಾದ ಸಭಾ ಕಾರ್ಯಕ್ರಮದ ಜೊತೆಗೆ ಪ್ರಾಯೋಜಕರನ್ನು ವಿಶೇಷವಾಗಿ ಪರಿಚಯಿಸಿ ಗೌರವಿಸುವ ನೂತನ ಆವಿಷ್ಕಾರಗಳು ಸೌರಭದ ಕೊಡುಗೆಗಳು. ಸುಮಾರು ಎರಡೂವರೆ ದಶಕಗಳ ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ಯಕ್ಷಗಾನ ವನ್ನು ಜೊತೆ ಜೊತೆಗೆ ಹಳ್ಳಿ ಹಳ್ಳಿಗಳಲ್ಲಿ ಸಂಘಟಿಸಿದ ಕಾರ್ಯ ಈಗಲೂ ಎಲ್ಲೆಡೆ ಸ್ಮರಿಸಲಾಗುತ್ತಿದೆ . ಈಗ ಮತ್ತೆ ಸೌರಭ ತನ್ನ ಘನತೆಯೊಂದಿಗೆ ಹೊಸ ಹೊಸ ಸಾಂಸ್ಕೃತಿಕ ಸಾಧ್ಯತೆಗಳನ್ನು ಲೋಕಕ್ಕೆ ನೀಡಬೇಕಾಗಿದೆ. ರಾಜ್ಯಾದ್ಯಂತ ತನ್ನದೇ ವಿಶೇಷ ಹಾಗೂ ಸುಸಂಸ್ಕೃತ ಸಾಂಸ್ಕೃತಿಕ ಬಳಗವನ್ನು ಸೌರಭ ಹೊಂದಿದೆ. ಇತ್ತೀಚೆಗೆ ನಿಧನರಾದ ಖ್ಯಾತ ತೆರಿಗೆ ಸಲಹೆಗಾರರಾದ ಶ್ರೀ ಎಂ.ಕೆ.ಹೆಗಡೆ, ಕೂಜಳ್ಳಿಯವರು ಸಹ ಸೌರಭದ ಸಂಸ್ಥಾಪಕ ನಿರ್ದೇಶಕರಾಗಿದ್ದರು.

RELATED ARTICLES  ಸರಸ್ವತಿ ಪಿ.ಯು ಕಾಲೇಜಿನಲ್ಲಿ ಭಕ್ತಿ ಭಾವದಿಂದ ನೆರವೇರಿದ ಶಾರದಾ ಪೂಜೆ

ಸೌರಭದ ನೂತನ ಪದಾಧಿಕಾರಿಗಳು ಹೀಗಿದ್ದಾರೆ.

ಶ್ರೀಕಾಂತ ಭಟ್ಟ ತುಂಬಲೇಮಠ – ಅಧ್ಯಕ್ಷ, ಮೋಹನ ಭಾಸ್ಕರ ಹೆಗಡೆ – ಉಪಾಧ್ಯಕ್ಷ, ಅರುಣ ಹೆಗಡೆ, ಮಾನೀರು – ಪ್ರಧಾನ ಕಾರ್ಯದರ್ಶಿ, ಎಸ್. ವಿ. ಹೆಗಡೆ ನಂದಯ್ಯನ್ – ಕೋಶಾಧ್ಯಕ್ಷ, ವಿನಾಯಕ ಹೆಗಡೆಕಟ್ಟೆ – ಸಹಕಾರ್ಯದರ್ಶಿ ಹಾಗೂ ಡಾ. ಅನಿಲ ಹೆಗಡೆ, ಜಯಂತ ಮಂಕಿಕರ್, ಡಿ.ಜಿ. ಹೆಗಡೆ ಬಡಗಣಿ, ಕಿರಣ ಭಟ್ಟ ಹೊನ್ನಾವರ, ಗಣೇಶ ಜೋಶಿ ಸಂಕೊಳ್ಳಿ ನಿರ್ದೇಶಕರುಗಳು.

RELATED ARTICLES  ಕುಮಟಾ ಪೊಲೀಸ್ ಠಾಣೆಯ ಎದುರು ಬಿಜೆಪಿಗರಿಂದ ಪ್ರತಿಭಟನೆ.