ಕಾರವಾರ : ಜಿಲ್ಲೆಯಲ್ಲಿ ಮಂಗನಕಾಯಿಲೆ ಆರ್ಭಟ ಮುಂದುವರೆದಿದ್ದು, ಕಾಯಿಲೆಯಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಶಿರಸಿಯ ಹತ್ತರಗಿ ನವಿಲಗಾರದಲ್ಲಿ ಮಂಗನಕಾಯಿಲೆಗೆ ಇಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇದರಿಂದಾಗಿ ಸಾವಿನ‌ ಸಂಖ್ಯೆ ‌ಮೂರಕ್ಕೇರಿದೆ.

RELATED ARTICLES  ಮನುಷ್ಯನಿಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ? ಆದರೆ ಇಲ್ಲೊಬ್ಬ ಬಾಲಕ ಮೊಟ್ಟೆ ಇಡುತ್ತಿದ್ದಾನೆ !

ಮೃತ ವ್ಯಕ್ತಿ ಮಂಗನಕಾಯಿಲೆಗೆ ಒಳಗಾಗಿ, ಕೆಲವು ದಿನಗಳಿಂದ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು. ಇದೀಗ ಚಿಕಿತ್ಸೆ ‌ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈಗಾಗಲೇ ಸಿದ್ದಾಪುರ ತಾಲೂಕಿನಲ್ಲಿ ಇಬ್ಬರೂ ಮಂಗನಕಾಯಿಲೆಯಿಂದಾಗಿ ಮೃತಪಟ್ಟಿದ್ದರು. ಜಿಲ್ಲೆಯಲ್ಲಿ ಈ ವರೆಗೆ 47 ಜನರಲ್ಲಿ ಕೆ.ಎಫ್.ಡಿ. ಸೋಂಕು ಪತ್ತೆಯಾಗಿದೆ. ಸಿದ್ದಾಪುರದಲ್ಲಿ ಅತೀ ಹೆಚ್ಚು ಮಂಗನಕಾಯಿಲೆ ಪ್ರಕರಣ ಪತ್ತೆಯಾಗಿದೆ. ಇನ್ನೂ ಶಿರಸಿಯಲ್ಲಿ ಇದೇ ಮೊದಲ ಪ್ರಕರಣ ಪತ್ತೆಯಾಗಿದ್ದು, ಮೃತಪಟ್ಟಿದ್ದಾರೆ.

RELATED ARTICLES  ಉಷಾ ಭಟ್ಟ ಅವರಿಗೆ ಡಾಕ್ಟರೇಟ್ ಪದವಿ