ಸಿದ್ದಾಪುರ: ತಾಲೂಕಿನಲ್ಲಿ ಮಂಗನ ಕಾಯಿಲೆ ವ್ಯಾಪಿಸತೊಡಗಿದ್ದು ಮತ್ತೆರಡು ಜನರನ್ನು ಬಲಿ ತೆಗೆದುಕೊಂಡಿದೆ. ಸೋಮವಾರ ಕಲ್ಲೂರ ಹಾಗೂ ಹೆಗ್ಡೆಕೊಪ್ಪದದ ತಲಾ ಒಬ್ಬರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಯೇ ರೋಗ ಉಲ್ಬಣಿಸಿ ಇಬ್ಬರೂ ವಯೋವೃದ್ಧ ಮೃತಪಟ್ಟಿದ್ದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

RELATED ARTICLES  3ನೇ ಬಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಇಕೋ ಬೀಚ್​

ಈವರೆಗೆ ತಾಲೂಕಿನಲ್ಲಿ ಒಟ್ಟೂ ಐವತ್ತು ಜನರಲ್ಲಿ ಕೆಎಫ್‌ಡಿ ಕಂಡು ಬಂದಿದ್ದು ಸೋಮವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಇಬ್ಬರನ್ನೂ ಸೇರಿ ಒಟ್ಟೂ ನಾಲ್ವರು ಮೃತಪಟ್ಟಂತಾಗಿದೆ. ಇದೀಗ ತಾಲೂಕಿನಲ್ಲಿ ಬಿರು ಬೇಸಿಗೆಯ ವಾತಾವರಣವಿದ್ದು ಮಂಗನ ಕಾಯಿಲೆ ಹರಡಲು ಇದು ಪೂರಕವೆನ್ನಲಾಗಿದೆ.ಆರೋಗ್ಯ ಇಲಾಖೆ ಈ ಕಾಯಿಲೆ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯತೆ ಕಂಡುಬರುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

RELATED ARTICLES  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಮೋದಿಗೆ ರಕ್ತದಲ್ಲಿ ಪತ್ರ.