ಕುಮಟಾ : ಕಾರ್ಯನಿರತ ಪತ್ರಕರ್ತರ ಸಂಘದ ಕುಮಟಾ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಎಂ.ಜಿ‌ ನಾಯ್ಕ, ಉಪಾಧ್ಯಕ್ಷರಾಗಿ ಜಯದೇವ ಬಳಗಂಡಿ ಹಾಗೂ ಕಾರ್ಯದರ್ಶಿಯಾಗಿ ಜನಮಾಧ್ಯಮ ವರದಿಗಾರ ಗಣೇಶ ಜೋಶಿ ಸಂಕೊಳ್ಳಿ ಆಯ್ಕೆಯಾಗಿದ್ದಾರೆ.

ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ಕಾರ್ಯನಿರತ ಪತ್ರಕರ್ತರ ಸಂಘದ ಈಗಾಗಲೇ ನೋಂದಾಯಿತ ಸದಸ್ಯರು, ಸಂಘದ ಉಪಾಧ್ಯಕ್ಷರಾಗಿ ಈವರೆಗೆ ಕಾರ್ಯನಿರ್ವಹಿಸುತ್ತಿದ್ದ ಪ್ರಜಾವಾಣಿ ವರದಿಗಾರ ಎಂ.ಜಿ ನಾಯ್ಕ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಿದರು. ಜೊತೆಗೆ ವಿಸ್ಮಯ ವಾಹಿನಿಯ ಸಂದರ್ಶಕ ಜಯದೇವ ಬಳಗಂಡಿ ಅವರನ್ನು ಉಪಾಧ್ಯಕ್ಷರಾನ್ನಾಗಿಯೂ, ಸತ್ವಾಧಾರ ನ್ಯೂಸ್ ನ ಗಣೇಶ ಜೋಶಿ ಸಂಕೊಳ್ಳಿಯವರನ್ನು ಕಾರ್ಯದರ್ಶಿಯನ್ನಾಗಿಯೂ ಆಯ್ಕೆಮಾಡಲಾಯಿತು.

RELATED ARTICLES  ಜಿಲ್ಲಾ ಜಾಗೃತ ಮಹಿಳಾ ಸಮಾವೇಶ ಡಿ.೧೦ ಕ್ಕೆ : ಗಿಬ್ ಹೈಸ್ಕೂಲ್ ಆವಾರದಲ್ಲಿ ಯೋಜನೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಪ್ರವೀಣ ಹೆಗಡೆ ಹಾಗೂ ಕಾರ್ಯದರ್ಶಿ ಮಂಜುನಾಥ ಈರಗೊಪ್ಪ ಅವರು ಕರ್ತವ್ಯದ ನಿಮಿತ್ತವಾಗಿ ಶಿರಸಿಗೆ ವರ್ಗಾವಣೆಗೊಂಡು, ಕುಮಟಾ ತಾಲೂಕಾ ಘಟಕದ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಅವರ ನಿರ್ದೇಶನದಂತೆ ಸರ್ವಸದಸ್ಯರ ಸಭೆ ಕರೆದು ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

RELATED ARTICLES  ಮೇ ೧೯ - ಸಾರಸ್ವತ ಕೊಂಕಣಿ ಪುರಸ್ಕಾರಗಳ ಪ್ರದಾನ

ಸಭೆಯಲ್ಲಿ‌ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರುಗಳಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಸದಾಶಿವ ಹೆಗಡೆ, ಚಂದನ ಟಿ.ವಿ ಯ ಗಣೇಶ ರಾವ್, ಹಿರಿಯ ಪತ್ರಕರ್ತ ಸುಬ್ರಾಯ ಭಟ್ಟ, ವಿಜಯವಾಣಿ ವರದಿಗಾರ ಎಸ್.ಎಸ್. ಶರ್ಮಾ, ಉದಯವಾಣಿ ವರದಿಗಾರ ಮಂಜುನಾಥ ದೀವಗಿ ಉಪಸ್ಥಿತರಿದ್ದರು.