ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ ಭಟ್ಕಳದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಚಿದಾನಂದ ಗಣಪತಿ ನಾಯ್ಕ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯವು Geotechnical Engineering ವಿಭಾಗದಲ್ಲಿ “Evaluation of shear strength and dilatancy parameters of different granular materials” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಿದ್ಧಪಡಿಸಿ ಸಲ್ಲಿಸಲಾದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಪ್ರಧಾನ ಮಾಡಿದೆ. ಪ್ರೊ. ಚಿದಾನಂದ ನಾಯ್ಕ ರವರು ಡಾ. ಕೆ.ವಿ.ಬಿ.ಎಸ್ ರಾಜು ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಚಿದಾನಂದರವರು ಕುಮಟಾ ತಾಲೂಕಿನ ಕಲಭಾಗ ಗ್ರಾಮದ ಗಣಪತಿ ಹೊನ್ನಪ್ಪ ನಾಯ್ಕ್ ಹಾಗೂ ಕುಮುದಾ ಗಣಪತಿ ನಾಯ್ಕ್ ರ ದ್ವಿತೀಯ ಪುತ್ರರಾಗಿದ್ದಾರೆ. ಅವರ ಈ ಸಾಧನೆಯನ್ನು ಅಂಜುಮನ್ ಮ್ಯಾನೇಜ್ಮೆಂಟ್, ಪ್ರಾಂಶುಪಾಲರಾದ ಡಾ. ಫಜಲುರ್ ರೆಹಮಾನ್, ರಿಜಿಸ್ಟ್ರಾರರಾದ ಪ್ರೊ. ಜಾಹೀದ್ ಖರೂರಿ ಹಾಗೂ ಅಂಜುಮನ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.

RELATED ARTICLES  AITM ನಲ್ಲಿ AICTE-ATAL ಪ್ರಾಯೋಜಿತ ಆರು ದಿನಗಳ ಆನ್‌ಲೈನ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ