ಕುಮಟಾ : ಬಿಜೆಪಿ ಶಿಕ್ಷಣ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕರನ್ನಾಗಿ ತಾಲೂಕಿನ ಎಂ. ಜಿ. ಭಟ್ಟ ಇವರನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಿಯುಕ್ತಿಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ.

ಎಂ.ಎಸ್ಸಿ, ಎಂ.ಎ, ಬಿಎಡ್ ಪದವೀಧರರಾದ ಎಂ.ಜಿ ಭಟ್ಟ ಅವರು ಶಿಕ್ಷಣ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದಾರೆ. ಜನಪರ ಹೋರಾಟ ವೇದಿಕೆಯ ಮೂಲಕ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿದ್ದು, ಎಬಿವಿಪಿಯ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಸಂಘ ಪರಿವಾರದಿಂದ ಬಂದ ಎಂ. ಜಿ ಭಟ್ಟರು ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಸಿತ್ತಿದ್ದು ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ಉತ್ತಮವಾಗಿ ನಿರ್ವಹಿಸಿ ಅಪಾರವಾದ ಜನ ಮನ್ನಣೆ ಗಳಿಸಿದ್ದಾರೆ.

RELATED ARTICLES  ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮ : ತಬಲಾ ಗುರು ಶೇಷಾದ್ರಿ ಅಯ್ಯಂಗಾರ್ ಗೆ ಸನ್ಮಾನ : ಸಂಘಟಕರ ಕಾರ್ಯದ ಬಗ್ಗೆ ಮೆಚ್ಚುಗೆ.

ಇವರಿಗೆ ಸಿಕ್ಕಿದ ರಾಜ್ಯದ ಜವಾಬ್ದಾರಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಎಂ.ಜಿ ಭಟ್ಟರ ಅಭಿಮಾನಿಗಳು ಅವರ ಹಿತೈಷಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.