ಕುಮಟಾ : ತಾಲೂಕಿನ ಅಘನಾಶಿನಿ ಗ್ರಾಮದಲ್ಲಿ ಚಿಣ್ಣರ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಯಕ್ಷಗಾನಕ್ಕೂ ಪೂರ್ವ ನಡೆದ ಸಭಾಕಾರ್ಯಕ್ರಮವನ್ನು ಯುವ ಕಾಂಗ್ರೆಸ್ ಧುರೀಣರಾದ ರವಿಕುಮಾರ ಎಂ ಶೆಟ್ಟಿ ಉದ್ಘಾಟಿಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು. ಯಕ್ಷಗಾನ ಕಲೆ ಉಳಿಯಬೇಕು ಎಂದರೆ ಇಂತಹ ಚಿಣ್ಣರು ಕಲಿಯಬೇಕು. ಮುಂದಿನ ಭವಿಷ್ಯದ ಪ್ರಜೆಗಳಾದ ಈ ಚಿಣ್ಣರು ಕಲೆಯನ್ನು ಉಳಿಸಿ ಬೆಳೆಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಗಣಪತಿ ನಾವಡ, ಬಾಬು ನಾಯ್ಕ, ಬೊಮ್ಮು ಗೌಡ, ಸುರೇಶ ನಾಯ್ಕ, ಮಹಾದೇವ ಹರಿಕಾಂತ ಇವರನ್ನು ಸನ್ಮಾನಿಸಲಾಯಿತು.
ಸಾವಿರಾರು ಯಕ್ಷಾಭಿಮಾನಿಗಳು ಊರಿನ ನಾಗರೀಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.