ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಇಂದು ಮಾಹಾಶಿವರಾತ್ರಿಯ ಅಂಗವಾಗಿ ಬೆಳಿಗ್ಗೆ ಯಾಗಶಾಲೆಯಲ್ಲಿ ರುದ್ರಹವನ ನಡೆಯಿತು. ಪರಮಾlಪೂಜ್ಯ ಶ್ರೀ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಪೂರ್ಣಾಹುತಿಯು ನೆರವೇರಿತು. ಕ್ರಿ.ಶ ನಾಲ್ಕನೇ ಶತಮಾನಕ್ಕೂ ಮೊದಲೇ ಸೋಂದಾ ಕ್ಷೇತ್ರದಲ್ಲಿ ಸರ್ವಸಂಗಪರಿತ್ಯಾಗಿಗಳು ತಮ್ಮ ಯೌಗಿಕ ಸಿದ್ಧಿಗಾಗಿ ಈ ಕ್ಷೇತ್ರದಲ್ಲಿನ ಶಾಲ್ಮಲಾ ನದಿಯ ಪ್ರಶಾಂತ ಪರಿಸರವನ್ನೇ ಆಯ್ಕೆಮಾಡಿಕೊಂಡಿದ್ದರು.ಶಾಲ್ಮಲೆ ಇಲ್ಲಿ ತನ್ನ ಹರಿವಿಗೆ ರೌದ್ರತೆಯ ಲಕ್ಷಣವನ್ನು ನೀಡದೆ ಶಾಂತತೆಯ ಸ್ವರೂಪವನ್ನು ನೀಡಿ ನಿರ್ಮಲ ಸ್ವರೂಪಿಣಿಯಾಗಿ ಯೋಗಿಗಳಿಗೆ ತಮ್ಮ ತಪಸ್ಸಿಗೆ,ಧಾರ್ಮಿಕ ಆಚರಣೆಗೆ ಅನುಕೂಲವಾಗುವ ತೀರ್ಥಸ್ವರೂಪಿಣಿಯಾಗಿಯೂ ಶತಶತಮಾನಗಳಿಂದ ಹರಿಯುತ್ತಿದ್ದಾಳೆ.ಇಂತಹ ಪಾವನವಾಹಿನಿಯ ದಂಡೆಯ ಮೇಲಿನ ಪುಣ್ಯ ಸ್ಥಳವೇ ಸೋಂದಾದ “ಭೀಮನ ಪಾದ”
ಐತಿಹಾಸಿಕ ಸ್ಥಳವಾದ ಭಿಮನಪಾದದಲ್ಲಿ ಉಭಯ ಶ್ರೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಅಲ್ಲಿರುವ ಶಿವಲಿಂಗಗಳಿಗೆ ವಿಶೇಷ ಪೂಜೆ ಹಾಗೂ ಸತ್ಯನಾರಾಯಣ ವ್ರತವನ್ನು ಆಚರಿಸಲಾಯಿತು. ರಾತ್ರಿ ಶ್ರೀ ಮಠದ ಆರಾಧ್ಯ ದೇವರುಗಳಾದ ಗಂಗಾವಿಶ್ವೇಶ್ವರ ಮತ್ತು ಚಂದ್ರಮೌಳೀಶ್ವರನಲ್ಲಿ ಶತರುದ್ರ ಅನುಷ್ಠಾನವು ಯತಿದ್ವಯರ ಸಮ್ಮುಖದಲ್ಲಿ ನೆರವೇರಲಿದೆ.
NEWS UPDATE
ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು...
satwawriter - 0
ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸ್ಪೆಷಾಲಿಟಿ ಆಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಮಾನ್ಯ ಶಾಸಕರಾದ ಭೀಮಣ್ಣ...
KUMTA NEWS
ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.
satwawriter - 0
ಕುಮಟಾ : ತಾಲೂಕಿನ ಕರ್ಕಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೊವೊ ನೊರ್ಡಿಸ್ಕ ಕಂಪನಿಯ ಸಿಎಸ್ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಮತ್ತು ಇತರ...
HONNAVAR NEWS
ಶಿಕ್ಷಕ ಪಿ.ಆರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ
ಹೊನ್ನಾವರ: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಶಿಶು ಸಂಗಮೇಶ ದತ್ತಿ ಪ್ರಶಸ್ತಿಯು ಶಿಕ್ಷಕ ಪಿ.ಆರ್.ನಾಯ್ಕರವರ ಮಕ್ಕಳ ಕೃತಿ ಪಾಟಿಚೀಲ ಕವನ ಸಂಕಲನಕ್ಕೆ ಸಂದಿವೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ...
ಫೇ. 20 ರಿಂದ ಹೊನ್ನಾವರ ಉತ್ಸವ
ಹೊನ್ನಾವರ: ಫೆಬ್ರವರಿ ೨೦ ರಿಂದ ೨೩ರವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಹೊನ್ನಾವರ ಉತ್ಸವ - ೨೦೨೫...
ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ
ಸಿದ್ದಾಪುರ: ತಾಲೂಕಿನ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಬೆಂಗಳೂರಿನಲ್ಲಿ ಡಿ.27 ರಿಂದ ಜರುಗುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಸಿದ್ದಾಪುರ ತಾಲೂಕು ಕನ್ನಡ...
ಹವ್ಯಕ ಎನ್ನುವುದೇ ಒಂದು ಆತ್ಮೀಯತೆ : ಶಿವಾನಂದ ಹೆಗಡೆ ಕಡತೋಕಾ.
ಹೊನ್ನಾವರ : ಹವ್ಯಕ ಎಂಬುದೇ ಒಂದು ಆತ್ಮೀಯತೆ. ಹವ್ಯಕ ಎಂಬುದು ಸ್ವಾಭಿಮಾನ. ಹವ್ಯಕ ಎಂಬುದು ಒಂದು ಒಂದು ಶಕ್ತಿ. ನಾವು ಹವ್ಯಕರು ಎಂಬುದೇ ನಮ್ಮ ಹೆಮ್ಮೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ...
ಯಕ್ಷಗಾನವು ಸಂಸ್ಕಾರ ನೀಡುವ ಕಲೆ : ಕಾಗೇರಿ
ಹೊನ್ನಾವರ : ನಮ್ಮ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿತ್ವ ಶ್ರೀಮಂತಗೊಳ್ಳುವುದು. ಯಕ್ಷಗಾನದಂತಹ ಕಲೆಯು ಮನರಂಜನೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ನಮಗೆ ಸಂಸ್ಕಾರವನ್ನು ನೀಡುತ್ತದೆ' ಎಂದು ಸಂಸದ...