ಕಾರವಾರ : ತಾಲೂಕಿನ ಮುದಗಾದ ನೌಕಾನೆಲೆ ಲೇಬರ್‌ ಕಾಲೋನಿಯಲ್ಲಿ‌ ಸಿಲಿಂಡರ್ ಸ್ಪೋಟಗೊಂಡು ಕಾರ್ಮಿಕರ ಕಾಲೋನಿಯಲ್ಲಿದ್ದ ಮನೆಗಳಿಗೆ ಬೆಂಕಿ ಬಿದ್ದಿರುವ ಘಟನೆ ನಡೆದಿದೆ. ನೌಕಾನೆಯ ಲೇಬರ್ ಕಾಲೋನಿಯಲ್ಲಿ ಎನ್‌ಸಿಸಿ ಗುತ್ತಿಗೆ ಕಾರ್ಮಿಕರು ಶೇಡ್ ನಲ್ಲಿ ಉಳಿದುಕೊಂಡಿದ್ದರು.‌ ಈ ವೇಳೆ‌ ಶೇಡ್ ಒಳಗೆ ಇದ್ದ ಅಡುಗೆ ಸಿಲಿಂಡರ್ ಸ್ಪೋಟ‌ಗೊಂಡಿದೆ. ಇದರಿಂದಾಗಿ ಶೆಡ್‌ಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಸ್ಪೋಟದ ‌ಸದ್ದು ಕೇಳಿ ಬರುತ್ತಿದ್ದಂತೆ ಒಳಗಿದ್ದ ಕಾರ್ಮಿಕರು ಹೊರಗಡೆ ಓಡಿಹೋಗಿದ್ದಾರೆ.

RELATED ARTICLES  ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

ಕಾರ್ಮಿಕ‌‌ ಕಾಲೋನಿಯಲ್ಲಿ 150ಕ್ಕೂ ಹೆಚ್ಚು ಶೆಡ್ ಗಳಿದ್ದು, ಇದರಲ್ಲಿ ನಾಲ್ಕೈದು ಶೆಡ್ ಗಳಿಗೆ ಬೆಂಕಿ ತಗುಲಿದೆ. ಬೆಂಕಿ ಬಿದ್ದಿರುವ ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

RELATED ARTICLES  ಕೆ.ಎಸ್.ಆರ್‌.ಟಿ.ಸಿ. ಬಸ್‌ ಚಲಿಸುವಾಗಲೇ ನಡೆಯಿತು ಅವಘಡ :