ಶಿರಸಿ: ಮನೆಯಲ್ಲಿದ್ದ ಅಡುಗೆ ಅನಿಲ ಸೋರಿಕೆಯಾಗಿ ನಿವಾಸಿಗಳು ಆಂತಕಕ್ಕೊಳಗಾಗಿ ಹೊರಗಡೆ ಓಡಿ ಹೋದ ಘಟನೆ ನಗರದ ಟಿಎಸ್‌ಎಸ್‌ ರಸ್ತೆಯಲ್ಲಿ ನಡೆದಿದೆ. ಟಿಎಸ್‌ಎಸ್‌ ರಸ್ತೆಯ ಪರಶುರಾಮ ಎಂಬುವವರ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ನಲ್ಲಿ ಗ್ಯಾಸ್ ವಾಸನೆ ಹೆಚ್ಚಾದಂತೆ ಎಚ್ಚರಗೊಂಡು ಹೊರಗಡೆ ಸಿಲೆಂಡ‌ರ್ ತಂದಿದ್ದಾರೆ. ತಕ್ಷಣ ರಾಯರ ಪೇಟೆಯಲ್ಲಿರುವ ಎಚ್‌ಪಿ ಗ್ಯಾಸ್ ಏಜೆನ್ಸಿಗೆ ಮಾಹಿತಿ ನೀಡಿದ್ದಾರೆ. ಎಜೆನ್ಸಿಯ ಸಿಬ್ಬಂದಿ ಆಗಮಿಸಿ, ಸೋರಿಕೆಯಿರುವ ಸಿಲೆಂಡರ್‌ಗೆ ಎಂಸೀಲ್ ಹಚ್ಚಿ, ಸೋರಿಕೆಯನ್ನು ತಡೆಗಟ್ಟಿದ್ದಾರೆ. ಗ್ಯಾಸ್ ಸೋರಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಮನೆಯವರೂ ಹೊರಗಡೆ ಓಡಿ ಬಂದಿದ್ದಾರೆ. ಗ್ಯಾಸ್ ಸೋರಿಕೆಯಿಂದ ಯಾವುದೇ ಅಪಾಯ ಉಂಟಾಗಲಿಲ್ಲ.

RELATED ARTICLES  ಉತ್ತರ ಕನ್ನಡ ಜಿಲ್ಲೆಯ 6 ಶಾಸಕರೂ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸದನದಲ್ಲಿ ಧ್ವನಿ ಎತ್ತಲೇಬೇಕು: ಅನಂತಮೂರ್ತಿ ಹೆಗಡೆ