ಭಟ್ಕಳ: ಬಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಹಾಗೂ ಡಿಜಿಟಲ್ ಸೇವಾ ಕೇಂದ್ರ ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಭಗತ್ ಸಿಂಗ್ ರವರ 110ನೇ ಜನ್ಮದಿನದ ಪ್ರಯುಕ್ತ ಮಾತೃವಂದನ ಕಾರ್ಯಕ್ರಮವೂ ಮುರ್ಡೇಶ್ವರದ ತೂದಳ್ಳಿಯ ಶ್ರೀ ವೀರ ಮಾಸ್ತಿ ಯುವಕ ಸಂಘದ ರಂಗಮಂದಿರದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಮುರ್ಡೇಶ್ವರದ ನಿವೃತ್ತ ಶಿಕ್ಷಕಿ ವನಮಾಲ ರಾಮದಾಸ ಹೆಗಡೆ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಖ್ಯಾತ ವೈದ್ಯ ಐ.ಆರ್.ಭಟ್ ಮಾತನಾಡಿ ಈಗ ದೇಶದ ಬೆನ್ನೆಲುಬು ಯುವಕ ಯುವತಿಯರೇ ಆಗಿದ್ದು, ಇಂತಹ ಕಾರ್ಯವನ್ನು ನಡೆಸುತ್ತಿರುವುದನ್ನು ನಾವು ಹೆಮ್ಮೆಪಡಲೇಬೇಕಾಗಿದೆ. ಅಲ್ಲದೇ ದೇಶಭಕ್ತರನ್ನು ಕೇವಲ ವರ್ಷಕ್ಕೊಮ್ಮೆ ನೆನಪುಮಾಡಿಕೊಳ್ಳದೇ ದಿನನಿತ್ಯವೂ ನಾವು ಇಂತ ದೇಶಭಕ್ತರನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಈ ದೇಶಭಕ್ತರ ಆದರ್ಶಗಳನ್ನು ನಾವು ಜೀವನದಲ್ಲಿ ರೂಡಿಸಿಕೊಳ್ಳಬೇಕಾಗಿದೆ. ನಾವು ಕೂಡ ನಮ್ಮ ದೇಶಕ್ಕಾಗಿ ಯಾವುದಾದರು ಒಂದು ರೀತಿಯ ಸೇವೆಮಾಡಲು ಸದಾ ತಯಾರಾಗಿ ಇರಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.” ಎಂದರು.
ಆರ್.ಎಸ್.ಎಸ್. ಸೇವಾ ಪ್ರಮುಖ ಗೋವಿಂದ ಕೆಸರಮನೆ ಮಾತನಾಡಿ ಇಂದು ಗೋಪೂಜೆ ಮಾತ್ರ ಪೂಜೆ ಅಥವಾ ಗಂಗಾ ಪೂಜೆ ಇರಬಹುದು ಈ ಎಲ್ಲಾ ಪೂಜೇಗಳು ತುಂಬ ಮಹತ್ವ ಪೂರ್ಣವಾದದ್ದಾಗಿದೆ. ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದೆ. ಕೃಷಿ ಹಾಗು ಗೋವು ಅವಿನಾಭಾವ ಸಂಬಂದವನ್ನು ಹೊಂದಿದೆ ಗೋವು ತುಂಬ ಮುಖ್ಯವಾದ ಸಂಪತ್ತಾಗಿದೆ. ಹಿಂದೆ ಗೋವುಗಳ ಮೂಲಕ ವ್ಯಕ್ತಿಯ ಸಂಪತ್ತನ್ನು ಅಳೆಯಲಾಗುತ್ತಿತ್ತು ಹಿಂದೆ ಅನೇಕ ಯುದ್ದಗಳು ಅನೇಕ ಬಲಿದಾನಗಳು ಗೋವುಗಳಿಗಾಗಿ ನಡೆದಿರುದನ್ನು ನಾವು ನೋಡಬಹುದು ಗೋವು ನಿರುಪಯುಕ್ತ ಪ್ರಾಣಿಯಲ್ಲಾ ಗೋಮೂತ್ರದ ಜೌಷದಿಂದ ನೂರಾರು ಕಾಯಿಲೆಗಳು ಗುಣವಾಗಿರುದು ವಿಜ್ಞಾನದಿಂದ ದ್ರಡಪಟ್ಟಿದೆ ಆದ್ದರಿಂದ ಇಂತ ಗೋಮಾತೆಯನ್ನು ರಕ್ಷಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಎಂದು ಹೇಳಿದರು.
ಬಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್‍ನ ಮುಖ್ಯ ನಿರ್ವಾಹಕ ಶಿವಕುಮಾರ್ ಮನುಷ್ಯರಾದವರು ಮಾನವೀಯತೆಯನ್ನು ಮರೆಯಬಾರದು. ಮನುಷ್ಯರಾದವರೇ ಮಾನವೀಯತೆ ಮರೆತರೇ ಜಗತ್ತು ನಾಶವಾಗುತ್ತದೆ. ಜಗತ್ತಿನಲ್ಲಿ ಕಟುಕತನ ನಾಶ ಮಾಡಬೇಕು. ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು, ಅವುಗಳಿಗೂ ಬದುಕಲು ಅವಕಾಶ ಕಲ್ಪಿಸಿ ನಾವು ಸಹ ಹಿತವಾಗಿ ಸಂತೋಷದಿಂದ ಬದುಕು ಸಾಗಿಸಬೇಕು. ಇನ್ನು ದೇಶದ ಉದ್ದಾರ ಯುವಜನತೆಯಿಂದ ಮಾತ್ರ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಯುವಕರು ಸಕಾರಾತ್ಮಕ ಕಾರ್ಯದತ್ತ ಸಾಗಬೇಕು. ಎಂದರು.
ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗೋಪೂಜೆ, ಗಂಗಾ ಪೂಜೆಯನ್ನು ನೆರವೆರಿಸಲಾಯಿತು. ಕಾರ್ಯಕ್ರಮದಲ್ಲಿ ಉತ್ತಮ ಗೋ ಪಾಲಕರಿಗೆ ಹಾಗೂ ಶ್ರಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಅವರ ತಾಯಂದಿರಿಗೆ ಆರತಿ ಎತ್ತಿ ಪೂಜೆ ಮಾಡಿ ಆರ್ಶೀವಾದ ಪಡೆದುಕೊಂಡರು. ಕಾರ್ಯಕ್ರಮವನ್ನು ಕಳೆದ 2 ವರ್ಷಗಳಿಂದ ಬಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್‍ನ ಮುಖ್ಯ ನಿರ್ವಾಹಕ ಶಿವಕುಮಾರ್ ಅವರು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಆಯೋಜಿಸಿದ್ದು, ಈ ವರ್ಷ ವಿಶೇಷವಾಗಿ ಅನ್ನದಾನ ಸೇವೆಯನ್ನು ಆಯೋಜಿಸಿದರು. ಕಾರ್ಯಕ್ರಮದಲ್ಲಿ ಈರಮ್ಮ ನಾರಾಯಣ ಮೋಗೇರ, ನಿವೃತ್ತ ಸೈನಿಕರು ಹಾಗೂ ಕಾರ್ಯನಿರತ ಶಿಕ್ಷಕ ವಾಸು ಶಿರಾಲಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೂದಳ್ಳಿ ಮುಖ್ಯ ಶಿಕ್ಷಕ ಮಹೇಶ ತೆರ್ನಮಕ್ಕಿ, ಬೈಲೂರಿನ ಶ್ರೀ ಗೋಪಾಲಕೃಷ್ಣ ಗೋಶಾಲಾ ಟ್ರಸ್ಟಿ ವಿಷ್ಣು ನಾಯ್ಕ, ಶ್ರೀ ವೀರ ಮಾಸ್ತಿ ಯುವಕ ಸಂಘದ ಅಧ್ಯಕ್ಷ ಸತೀಶ ಮೋಗೇರ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.