ಶಿರಸಿ: ರಾಜ್ಯದ ಅತಿದೊಡ್ಡ ಜಾತ್ರೆಯಾದ ಶಿರಸಿ ಮಾರಿಕಾಂಬಾ ಜಾತ್ರಾ ರಥೋತ್ಸವವು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಸಾಗಿದೆ. ಮಂಗಳವಾರ ರಾತ್ರಿ ಕಲ್ಯಾಣೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದ್ದು, ಬುಧವಾರ ಬೆಳಿಗ್ಗೆ ಮಾರಿಕಾಂಬಾ ದೇವಸ್ಥಾನದಿಂದ ‌ಎದುರಿನಲ್ಲಿ ವಿವಿಧ ಧಾರ್ಮಿಕ ಸಂಪ್ರದಾಯಗಳ ನಂತರ ರಥಾರೂಢಳಾದ ಶಕ್ತಿದೇವತೆಯ ರಥೋತ್ಸವವು 8.57ರ ವೇಳೆಗೆ ಪ್ರಾರಂಭವಾಗಿದೆ. ರಥದಲ್ಲಿ ವಿರಾಜಮಾನಳಾದ ದೇವಿಯನ್ನು ರಸ್ತೆಯ ಇಕ್ಕೆಲದಲ್ಲಿ ನಿಂತು ಭಕ್ತರು ಭಕ್ತಿಯಿಂದ ವೀಕ್ಷಿಸಿ ಬಾಳೆ ಹಣ್ಣು, ಹರಕೆ ಕೋಳಿ, ಕಡಲೆ‌ ಎಸೆದು ಹರಕೆ ಸಲ್ಲಿಸುತ್ತಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ದೇವಿ ಬಿಡಕಿ ಬಯಲಿನಲ್ಲಿ ಗದ್ದುಗೆ ಏರಲಿದ್ದು, ಗುರುವಾರ ಬೆಳಿಗ್ಗೆ 5 ರಿಂದ ಮಾ.27ರ ಬೆಳಿಗ್ಗೆ 10ರ ತನಕ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. ರಥೋತ್ಸವದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಭಕ್ತರು ಸೇರಿದ್ದಾರೆ.

ರಾಜ್ಯದಲ್ಲಿಯೇ ಅತಿದೊಡ್ಡ ಜಾತ್ರಾ ಮಹೋತ್ಸವ ಎನ್ನುವ ಖ್ಯಾತಿ ಪಡೆದಿರುವ ಶಿರಸಿ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ನಾಡಿನ ಶಕ್ತಿ ಪೀಠದಲ್ಲಿ ಒಂದಾದ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ರಾಜ್ಯದಿಂದಲ್ಲದೇ ದೇಶದ ವಿವಿಧ ರಾಜ್ಯಗಳಿಂದ ಸಹ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮಾರಿಕಾಂಬ ಜಾತ್ರಾ ಮಹೋತ್ಸವ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯಲಿದ್ದು ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಿಂದ ಪ್ರಾರಂಭವಾಗಿದ್ದು ಇಂದು ಬೆಳಿಗ್ಗೆ ದೇವಿಯ ಮೂರ್ತಿಯನ್ನ ಮಾರಿಕಾಂಬ ದೇವಸ್ಥಾನದಿಂದ ರಥದ ಮೂಲಕ ಮೆರವಣಿಗೆಯಲ್ಲಿ ನಗರದ ಬಸ್ ನಿಲ್ದಾಣದ ಬಳಿ ಇರುವ ಗದ್ದುಗೆಗೆ ತರಲಾಯಿತು. ರಥವನ್ನ ದೇವಸ್ಥಾನದಿಂದ ತರುವಾಗ ವಿವಿಧ ಕಲಾತಂಡಗಳು, ವಾದ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಇನ್ನಷ್ಟು ರಂಗು ಹೆಚ್ಚಿಸಿದವು.

RELATED ARTICLES  ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ.

ಮಾರಿಕಾಂಬ ಜಾತ್ರಾ ಮಹೋತ್ಸವ ಒಟ್ಟು 9 ದಿನಗಳ ಕಾಲ ನಡೆಯಲಿದೆ. ಗದ್ದುಗೆಗೆ ಕುಳಿತ ಮಾರಿಕಾಂಬೆಗೆ ಇಂದಿನಿಂದ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುವುದು. ಅಲ್ಲದೇ ರಾಜ್ಯದ ಮೂಲೆ ಮೂಲೆಯಿಂದ ಬಂದಂತಹ ಜೊತೆಗೆ ದೇಶದ ವಿವಿಧ ಭಾಗಗಳಿಂದ ಬಂದಂತಹ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಜಾತ್ರೆಯನ್ನ ಅದ್ದೂರಿಯಾಗಿ ನೆರವೇರಿಸಲು ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ದೇವಸ್ಥಾನದಲ್ಲಿ ಬರುವ ಎಲ್ಲಾ ಭಕ್ತರಿಗೂ ಉಚಿತವಾಗಿ ಅನ್ನಸಂತರ್ಪನೆ ನೀಡಲಾಗುತ್ತಿದೆ.

ಇದರ ಜೊತೆಗೆ ಯಾವುದೇ ಅನಾಹುತ ಆಗದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತನ್ನ ಸಹ ಮಾಡಲಾಗಿದೆ. ಶಿರಸಿ ಜಾತ್ರೆಯನ್ನ ನೋಡುವುದೇ ವಿಶೇಷವಾಗಿದ್ದು ಇಂದಿನಿಂದ ಜಾತ್ರೆ ಪ್ರಾರಂಭವಾಗಿದ್ದು ದೇವಿಯನ್ನ ಗದ್ದುಗೆಯಲ್ಲಿ ದರ್ಶನ ಪಡೆದಿರುವುದು ಸಂತಸ ಆಗಿದೆ ಅಂತಾ ಭಕ್ತರು ಖುಷಿ ಪಟ್ಟರು. ಜಾತ್ರೆಯ ಮತ್ತೊಂದು ವಿಶೇಷವೆಂದರೆ ಇಲ್ಲಿ ಪ್ರಾಣಿ ಬಲಿಯ ಬದಲಾಗಿ ಬೂದುಕುಂಬಳ ಕಾಯಿಯನ್ನ ಬಲಿಯಾಗಿ ನೀಡುವ ಮೂಲಕ ಪ್ರಾಣಿ ಬಲಿಯನ್ನ ವಿರೋದಿಸಲಾಗುತ್ತದೆ. ಎಂದಿನಂತೆ ಈ ಬಾರಿ ಸಹ ಸಂಪ್ರದಾಯದಂತೆ ಗದ್ದುಗೆ ಮುಂದೆ ಬೂದು ಕುಂಬಳ ಕಾಯಿಯನ್ನ ಬಲಿ ನೀಡಲಾಯಿತು. ಇನ್ನು ಈ ಬಾರಿ ಜಾತ್ರೆಯಲ್ಲಿ ಯಾವುದೇ ಅನಾಹುತ ಆಗದಂತೆ ಎಲ್ಲಡೆ ಸಿಸಿಟಿವಿಗಳನ್ನ ಸಹ ಅಳವಡಿಸಿದ್ದು ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ.

RELATED ARTICLES  ಬಿಜೆಪಿ ಅಭ್ಯರ್ಥಿ ಕಾಗೇರಿ ಗೆಲುವು.
FB IMG 1710953877082

ಇನ್ನೂ ಲಕ್ಷಾಂತರ ಭಕ್ತ ಸಾಗರದಲ್ಲಿ ಹದಿನೈದಕ್ಕೂ ಹೆಚ್ಚು ಮಕ್ಕಳು ಪಾಲಕರಿಂದ ಮಿಸ್ ಆಗಿದ್ದರು, ಆದ್ರೆ ಪೊಲೀಸರ ಸಹಕಾರದಿಂದ ಎಲ್ಲ ಮಕ್ಕಳು ಪಾಲಕರ ಕೈ ಸೇರಿದ್ರು. ಶಿರಸಿಯಲ್ಲಿ ಈಗ ಜಾತ್ರೆಯ ಸಂಭ್ರಮ ಮುಗಿಲು ಮುಟ್ಟಿದ್ದು ಭಕ್ತರು ಶಿರಸಿಯತ್ತ ತಂಡೋಪಾದಿಯಲ್ಲಿ ಆಗಮಿಸುವ ಮೂಲಕ ದೇವಿ ದರ್ಶನ ಪಡೆಯಲು ಮುಗಿ ಬೀಳುತ್ತಿದ್ದಾರೆ. ಇನ್ನು 7 ದಿನಗಳ ಕಾಲ ಜಾತ್ರೆ ನಡೆಯಲಿದೆ.

ಶಿರಸಿ ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಭೀಮಣ್ಣ ನಾಯ್ಕ ಅವರು,‌ಇಂದು ಶಿರಸಿಯಲ್ಲಿ ನಡೆದ ಮಾರಿಕಾಂಬಾ ದೇವಿ ಜಾತ್ರಾ ರಥೋತ್ಸವ ದಲ್ಲಿ ಡೊಳ್ಳು ಕುಣಿತ ತಂಡದೊಂದಿಗೆ ಆಗಮಿಸಿ ಡೊಳ್ಳು ಬಾರಿಸಿ ಕುಣಿಯುವ ಮೂಲಕ ಗಮನ ಸೆಳೆದಿದ್ದಾರೆ.ಶಾಸಕ ಎನ್ನುವ ಅಹಃ ಇಲ್ಲದೆ ಸಾಮಾನ್ಯರಂತೆ ಲಕ್ಷಾಂತರ ಭಕ್ತರ ಮದ್ಯೆ ಡೊಳ್ಳು ಬಾರಿಸಿ ಕುಣಿದು ಸಂಭ್ರಮಿಸಿದರು.