ಕುಮಟಾ: ತಾಲೂಕಿನ ಚಿತ್ರಗಿಯ ಸುತ್ತಮುತ್ತ ಕಳೆದ ಕೆಲವು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಶಾಸಕ ದಿನಕರ ಶೆಟ್ಟಿ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆಗಳ ಓಡಾಟ ವ್ಯಾಪಕವಾಗಿ ಕಂಡುಬಂದಿತ್ತು. ಅದಲ್ಲದೆ ಚಿರತೆಯು ಮನೆಯ ಬಾಗಿಲಿನಲ್ಲಿ ಬಂದು ನಾಯಿಯನ್ನೂ ಹೊತ್ತೊಯ್ದ ಘಟನೆಯೂ ನಡೆದಿತ್ತು.

RELATED ARTICLES  ಕೀರ್ತನಾಕಾರ ದತ್ತಾತ್ರೇಯ ನಾಯ್ಕರಿಗೆ ಶ್ರದ್ಧಾಂಜಲಿ : ಸುಮನಸಿನ ವ್ಯಕ್ತಿತ್ವದ ಸ್ಮರಣೆ.

ಮಾಧ್ಯಮದವರೊಂದಿಗೆ ಮಾತನಾಡಿದ ದಿನಕರ ಶೆಟ್ಟಿ, ಕಳೆದ ಕೆಲವು ದಿನಗಳಿಂದ ಈ ಚಿರತೆ ಚಿತ್ರಗಿ, ಹಳಕಾರ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕವನ್ನು ಉಂಟುಮಾಡಿತ್ತು. ಡಿ.ಎಫ್.ಓ. ಯೋಗೇಶ್ ಹಾಗೂ ಎ.ಸಿ.ಎಫ್. ಲೋಹಿತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಕೆಲವು ತಿಂಗಳುಗಳ ಹಿಂದೆ ಹೆಗಡೆಯಲ್ಲಿ ಒಂದು ಚಿರತೆಯನ್ನು ಅಧಿಕಾರಿಗಳು ಸೆರೆಹಿಡಿದು ಅರಣ್ಯಪ್ರದೇಶಕ್ಕೆ ರವಾನಿಸಿದ್ದರು. ನಿಜಕ್ಕೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ಪ್ರಶಂಸನೀಯವಾದುದು ಎಂದು ಹೇಳಿದರು.

RELATED ARTICLES  ಉದಯ ಸ್ಪೋರ್ಟ್ಸ್ ವರ್ಲ್ಡ್' ನೂತನ ಮಳಿಗೆಯ ಉದ್ಘಾಟನಾ ಸಮಾರಂಭ : ನೀವೂ ಜೊತೆಗಿದ್ದು ಬೆಂಬಲಿಸಲು ಸಂಸ್ಥಾಪಕರ ಮನವಿ.

ವಲಯ ಅರಣ್ಯಾಧಿಕಾರಿ ಎಸ್. ಟಿ. ಪಟಗಾರ, ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ನಾಯ್ಕ್, ರಾಘವೇಂದ್ರ ನಾಯ್ಕ್ ಹಾಗೂ ಹೂವಣ್ಣ ಗೌಡ, ಪ್ರಮುಖರಾದ ರಾಘವೇಂದ್ರ ನಾಯಕ, ಜಯಾ ಶೇಟ್, ಜಾಯ್ಸನ್ ಡಿಸೋಜ, ರಾಮದಾಸ ಭಂಡಾರಿ ಮತ್ತಿತರರು ಇದ್ದರು.