ಶಿರಸಿ: ಸ್ಥಳೀಯವಾಗಿ ಕೆಲಸ ಮಾಡುವವರಿಗೆ ಈ ಬಾರಿ ಟಿಕೇಟ್ ನೀಡಲಾಗುತ್ತದೆ. ಸ್ವತಃ ರಾಹುಲ್ ಗಾಂಧೀಯವರೆ ಕಾರ್ಯಕರ್ತರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಆದ್ದರಿಂದ ನೇರವಾಗಿ ಟಿಕೇಟ್ ತರುವ ಪ್ರಮೇಯ ಈ ಬಾರಿ ಉದ್ಭವಿಸುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ತಿಳಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಒಟ್ಟೂ 241 ಪಂಚಾಯತಗಳಲ್ಲಿ ಪಕ್ಷದ ಕಚೇರಿಯನ್ನು ತೆರೆಯಲಾಗುತ್ತಿದೆ. ಘಟಕ ಅಧ್ಯಕ್ಷರ ಮನೆಯ ಬಳಿಯಲ್ಲಿ ಕಚೇರಿಯನ್ನು ಪ್ರಾರಂಭಿಸಲಾಗುತ್ತಿದೆ. ಇದರಿಂದ ಪ್ರತಿ ಪಂಚಾಯತ ಮಟ್ಟದಲ್ಲಿಯೂ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಲಿದೆ ಎಂದರು.

RELATED ARTICLES  ನದಿಯಲ್ಲಿ ಬಿದ್ದು ಯುವಕ ಸಾವು : ಬಡಗಣಿ ನದಿಯಲ್ಲಿ ದುರ್ಘಟನೆ

ಪ್ರತಿ ಮನೆಗಳಿಗೂ ನಮ್ಮ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಮುಟ್ಟಿಸಲಾಗುತ್ತದೆ. ಕುಟುಂಬದ ಜನರಿಗೆ ಸರ್ಕಾರ ಫಲಾನುಭವಗಳ ಬಗ್ಗೆ ತಿಳಿಸಲಾಗುತ್ತಿದೆ. ಇದರಿಂದ ನಮ್ಮ ಬಗ್ಗೆ ಅಪಪ್ರಚಾರ ಮಾಡುವವರಿಗೆ ಸರಿಯಾಗಿ ಹೇಳಿದಂತಾಗುತ್ತದೆ. ಬಿಜೆಪಿಯವರು ಅಪಪ್ರಚಾರದಲ್ಲಿ ನಿಸ್ಸಿಮರು. ಆದ್ದರಿಂದ ಕಾರ್ಯಕರ್ತರು ನಮ್ಮ ಸಾಧನೆಗಳನ್ನು ತಿಳಿಸುವಲ್ಲಿ ನಿರತರಾಗಿದ್ದಾರೆ ಎಂದರು.
ಸಚಿವ ಅನಂತಕುಮಾರ ಹೆಗಡೆ ಅವರು ಸಮಾವೇಶವೊಂದರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಬೇರು ಸಮೇತ ಕಿತ್ತೋಗೆಯುವುದಾಗಿ ಹೇಳಿದ್ದಾರೆ. ಆದರೆ ನೂರಾರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಕಡ್ಲೆ ಗಿಡವಲ್ಲ. ಇದೊಂದು ಪಾತಾಳದಲ್ಲಿ ಗಟ್ಟಿಯಾಗಿ ಬೇರೂರಿರುವ ಆಲದ ಮರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಟೀಕಿಸಿದರು.

RELATED ARTICLES  ಕುಮಟಾ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಹೊನ್ನಪ್ಪ ನಾಯಕ.

ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ ಜಿಲ್ಲೆಯ 1400ಕ್ಕೂ ಅಧಿಕ ಬೂತ್ ವ್ಯಾಪ್ತಿಯಲ್ಲಿ ಸುಮಾರು 14400 ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರದ ಎಲ್ಲಾ ಜನಪರ ಅಭಿವೃದ್ಧಿ ಕೆಲಸಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ಸಾಧನೆಯ ಕೈಪಿಡಿಯನ್ನು ಎಲ್ಲರಿಗೂ ನೀಡಲಾಗುತ್ತಿದೆ. ಇಲ್ಲಿ ನಮ್ಮ ಎಲ್ಲಾ ಕಾರ್ಯಕರ್ತರು ಸ್ವ ಪ್ರೇರಣೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.