ಈ ಬಾರಿ ಲೋಕಸಭಾ ಟಿಕೆಟ್ ಪ್ರಬಲ ಹಿಂದುತ್ವವಾದಿ ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಕೈ ತಪ್ಪಿದೆ. ಆದರೆ ಜಿಲ್ಲೆಯಲ್ಲಿ ತನ್ನದೇ ಪ್ರಾಬಲ್ಯ ಹೊಂದಿರಯವ ಅನಂತಕುಮಾರ್ ಹೆಗಡೆ ತನ್ನದೇ ಆದ ಕಟ್ಟಾ ಅಭಿಮಾನಿಗಳ ಮತ ಬ್ಯಾಂಕ್ ಹೊಂದಿದ್ದಾರೆ. ಅನಂತಣ್ಣ ಮನಸ್ಸುಮಾಡಿದರೆ ಏನು ಬೇಕಾದರೂ ಮಾಡಿಯಾರು..! ಎಂಬುದು ಎಲ್ಲೆಡೆ ಕೇಳುವ ಮಾತು. ಈ ಹಿಂದೆ ಹೆಗಡೆಯವರ ಪರಿಶ್ರಮದಿಂದ ಉ.ಕ ದಲ್ಲಿ ಮೂರು ಶಾಸಕರು ಆಯ್ಕೆಯಾಗಿದ್ದರು. ಹೀಗಾಗಿ ಅನಂತಕುಮಾರ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ಬಿಜೆಪಿ ವರಿಷ್ಠರು ಬಳಸಿಕೊಳ್ಳಲು ಚಿಂತನೆ ನಡೆದಿರುವ ಬಗ್ಗೆ ಬಿಜೆಪಿ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.

RELATED ARTICLES  ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಶಾಸಕ‌ ದಿನಕರ‌ ಶೆಟ್ಟಿ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.

ಅನಂತಕುಮಾರ್ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ತಂದು ಮುಖ್ಯಮಂತ್ರಿ ಮಾಡಬೇಕು ಎನ್ನುವುದು, ಈ ಹಿಂದೆಯೂ ಹಲವಾರು ಬಾರಿ ಚರ್ಚೆಯಾಗಿ, ದೊಡ್ಡ ಅಭಿಯಾನದ ರೂಪನ್ನೂ ಪಡೆದಿತ್ತು. ಇದೀಗ ಆ ಸಮಯ ಬಂದಿದೆ ಎಂಬ ಮಾತೂ ಕೇಳಿಬರುತ್ತಿದೆ.

ಸದ್ಯ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ಶಿವರಾಮ್ ಹೆಬ್ಬಾರ್ ಇದ್ದರೂ ಕೆಲವೇ ತಿಂಗಳುಗಳಲ್ಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಅದಲ್ಲದೇ ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ಹೆಬ್ಬಾರ್ ರವರನ್ನು ಮರಳಿ ಕರೆತರಲು ವೇದಿಕೆ ಸಿದ್ದವಾಗಿದೆ. ಯಾವುದೇ ಕ್ಷಣದಲ್ಲಿ ಹೆಬ್ಬಾರ್ ಕಾಂಗ್ರೆಸ್ ಸೇರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅನಂತಕುಮಾರ್ ಹೆಗಡೆ ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ರವರನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಅಕಾಡಕ್ಕಿಳಿಸುವ ಸಾಧ್ಯತೆಗಳಿವೆ ಎನ್ನುತ್ತದೆ ಬಿಜೆಪಿ ಮೂಲಗಳು.

RELATED ARTICLES  ರಾಜಕೀಯ ನಿವೃತ್ತಿ ಘೋಷಿಸಿದ ಶಾರದಾ ಶೆಟ್ಟಿ.

ಶಿರಸಿ ವಿಧಾನಸಭಾ ಕ್ಷೇತ್ರದಿಂದ ಕಾಗೇರಿ ಬದಲು ಶಶಿಭೂಷಣ್ ಹೆಗಡೆ , ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಅನಂತಕುಮಾರ್ ಹೆಗಡೆಯವರನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಸದ್ಯ ಅನಂತಕುಮಾರ್ ಹೆಗಡೆ ರವರನ್ನು ರಾಜ್ಯ ರಾಜಕಾರಣಕ್ಕೆ ಬಳಸಿಕೊಳ್ಳುವ ಯೋಚನೆ ಬಿಜೆಪಿಗಿದೆ ಎನ್ನಲಾಗಿದ್ದು, ಅನಂತನ ಮನ ಏನು ಎಂಬುದರ ಮೇಲೆ ಎಲ್ಲವೂ ನಿಂತಿದೆ.