ಕಳೆದ ಮೂವತ್ತು ವರ್ಷಗಳಿಂದ ಸಂಸದರಾಗಿದ್ದ ಅನಂತಕುಮಾರ‌ ಹೆಗಡೆ ಅವರನ್ನ ಕೈ ಬಿಟ್ಟು ಮಾಜಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉ.ಕ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಿನ್ನೆ ಮುಗಿದಿದ್ದು, ಕಾಗೇರಿ ಟಿಕೆಟ್ ಪಡೆದುಕೊಂಡು ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುವ ಮಾತುಗಳನ್ನು ಆಡಿದ್ದರು.

ಕಳೆದ ಮೂರು ದಶಕಗಳ ಕಾಲ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರನ್ನು ಭೇಟಿಮಾಡಿ ಅವರ ಬೆಂಬಲ ಕೇಳುವುದಾಗಿಯೂ ಕಾಗೇರಿ ತಿಳಿಸಿದ್ದರು. ಆದರೆ ಇಂದು ಸಂಜೆ ಅನಂತಕುಮಾರ ಹೆಗಡೆಯವರೇ ಬಿಜೆಪಿ ಕಛೇರಿಗೆ ಬಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿಮಾಡಿದ್ದಾರೆ ಎನ್ನಲಾಗಿದ್ದು ಫೋಟೋ ಒಂದು ಬಿಜೆಪಿಗರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಆದರೆ ಅದು ಎಂದಿನ ಫೋಟೋ ಎಂಬುದು ಮಾತ್ರ ಗಮನಾರ್ಹ. ಬಿಜೆಪಿಗರು ತಿಳಿಸಿರುವಂತೆ ಇದು ಬೆಂಗಳೂರಿನ ಬಿಜೆಪಿ ಆಫೀಸ್ ನಲ್ಲಿ ಭೇಟಿಯಾದ ಕ್ಷಣ. ಇದು ಹಳೆಯ ಫೋಟೋವಾಗಿದ್ದರೂ, ಇದೀಗ ಬಹಳ ವೈರಲ್ ಆಗಿದೆ.

RELATED ARTICLES  ಧಾರ್ಮಿಕ ಆಚರಣೆಗೂ ತಟ್ಟಿದ ನೀತಿ ಸಂಹಿತೆಯ ಬಿಸಿ.

ಕಾಗೇರಿ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅನಂತ್ ಕುಮಾರ ಹೆಗಡೆ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆಯೋ ಇಲ್ಲವೋ? ಅಥವಾ ಅವರ ನಡೆ ಏನು ಎಂಬ ಬಗ್ಗೆ ಹಲವಾರು ಗೊಂದಲದ ಹೇಳಿಕೆಗಳು ವ್ಯಕ್ತವಾಗಿತ್ತು. ಇದೀಗ ಇಬ್ಬರೂ ದೋಸ್ತಿಗಳಂತೆ ಕೈ ಕೈ ಮಿಲಾಯಿಸಿದ್ದು, ಬಿಜೆಪಿ ಅಭ್ಯರ್ಥಿಗೆ ಅನಂತ ಬಲ ದೊರೆತಿದೆ ಎಂಬಂತೆ ಬಿಂಬಿತವಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ಸಿಗಬೇಕಿದ್ದು, ಫೋಟೋ ಬೆಂಗಳೂರಿನ ಹಳೆಯ ಫೋಟೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮುಂದಿನ ನಡೆ ಏನು ಎಂದೂ ಕಾದು ನೋಡಬೇಕಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು