ಕಾರವಾರ : ಈ ಬಾರಿ ಲೋಕಸಭಾ ಟಿಕೆಟ್ ಪ್ರಬಲ ಹಿಂದುತ್ವವಾದಿ ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಕೈ ತಪ್ಪಿದೆ. ಆದರೆ ಜಿಲ್ಲೆಯಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಅನಂತಕುಮಾರ ಹೆಗಡೆ ತನ್ನದೇ ಆದ ಕಟ್ಟಾ ಅಭಿಮಾನಿಗಳ ಮತ ಬ್ಯಾಂಕ್ ಹೊಂದಿದ್ದಾರೆ. ಅನಂತಣ್ಣನಿಗೆ ಟಿಕೆಟ್ ಕೈತಪ್ಪಿದಂತೆ, ಅವರ ಮುಂದಿನ ನಡೆ ಏನು ಎಂದು ಬಹುವಾಗಿ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದು ಬಂದಿಲ್ಲ.

RELATED ARTICLES  ದಿನಾಂಕ 03/07/2019 ರ ದಿನ ಭವಿಷ್ಯ ಇಲ್ಲಿದೆ.

ಪಕ್ಷದ ವರಿಷ್ಠರು ಈ ಹಿಂದೆ ವಿಧಾನಸಭಾ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಕಾಗೇರಿಯವರು ಉತ್ತರ ಕನ್ನಡ ಲೋಕಸಭಾ ಚುನಾಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಕ್ಷೇತ್ರದಲ್ಲಿ ಅನುಭವಿ ಅನಂತಕುಮಾರ ಹೆಗಡೆಯವರೆ ಸಲಹೆ, ಮಾರ್ಗದರ್ಶನ ಪಡೆಯುತ್ತೇನಲ್ಲದೇ ನಾನು ಮತ್ತು ಅವರು ಸೇರಿ ಬಿಜೆಪಿ ಗೆಲುವಿಗೆ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಅನಂತಣ್ಣ ಮನಸ್ಸುಮಾಡಿದರೆ ಏನು ಬೇಕಾದರೂ ಮಾಡಿಯಾರು..! ಎಂಬುದು ಎಲ್ಲೆಡೆ ಕೇಳುವ ಮಾತು. ಈ ಹಿಂದೆ ಹೆಗಡೆಯವರ ಪರಿಶ್ರಮದಿಂದ ಉ.ಕ ದಲ್ಲಿ ಮೂರು ಶಾಸಕರು ಆಯ್ಕೆಯಾಗಿದ್ದರು. ಹೀಗಾಗಿ ಅನಂತಕುಮಾರ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ಬಿಜೆಪಿ ವರಿಷ್ಠರು ಬಳಸಿಕೊಳ್ಳಿ ಹಾಗೂ ಅವರಿಗೆ ಸೂಕ್ತ ಸ್ಥಾನಮಾನ ಸಿಗುವಂತಾಗಲಿ ಎಂಬುದು. ಅವರ ಅಭಿಮಾನಿಗಳ ಹಾರೈಕೆ. ಅನಂತಕುಮಾರ್ ಹೆಗಡೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಹೊಂದಿದ ಹಲವಾರು ಅಭಿಮಾನಿಗಳಲ್ಲಿದ್ದು, ಅವರ ಆಸೆ ಈಡೇರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಬಸವರಾಜ ಸ್ವಾಮಿಗಳು.