ಕುಮಟಾ : ಪ್ರಭಲ ಹಿಂದುತ್ವ ವಾದಿ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಸಂಸದರಾಗಿದ್ದ ಅನಂತಕುಮಾರ‌ ಹೆಗಡೆ ಬದಲಾಗಿ ಮಾಜಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉ.ಕ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಿನ್ನೆ ಮುಗಿದಿದ್ದು, ಕಾಗೇರಿ ಟಿಕೆಟ್ ಪಡೆದುಕೊಂಡು ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುವ ಮಾತುಗಳನ್ನು ಆಡಿದ್ದರು.

ಈ ಹಿನ್ನೆಲೆಯಲ್ಲಿ ಅನಂತಕುಮಾರ್ ಹೆಗಡೆ ಹಾಗೂ ಕಾಗೇರಿ ಅವರು ಒಟ್ಟಿಗೆ ಇದ್ದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿತ್ತು. ಬಿಜೆಪಿಯ ಕೆಲವರು ಅದನ್ನು ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭೇಟಿಯಾದ ಸುದ್ದಿ ಹರಿದಾಡಿದ್ದು, ಈ ಬಗ್ಗೆ ಬಿಜೆಪಿಗರು ತಿಳಿಸಿರುವಂತೆ ಇದು ಬೆಂಗಳೂರಿನ ಬಿಜೆಪಿ ಆಫೀಸ್ ನಲ್ಲಿ ಭೇಟಿಯಾದ ಕ್ಷಣ. ಇದು ಹಳೆಯ ಫೋಟೋ ಎನ್ನಲಾಗಿದೆ. ಆದರೆ ಈ ಫೋಟೋ ಇದೀಗ ಬಹಳ ವೈರಲ್ ಆಗಿದೆ.

RELATED ARTICLES  ಬಂದ್ ಆಗಲ್ಲ ಶಿರಸಿ ಕುಮಟಾ ರಸ್ತೆ : ಖಡಕ್ ವಾರ್ನ ನೀಡಿದ ಮಂಕಾಳ ವೈದ್ಯ.

ಕಾಗೇರಿ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅನಂತ್ ಕುಮಾರ ಹೆಗಡೆ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆಯೋ ಇಲ್ಲವೋ? ಅಥವಾ ಅವರ ನಡೆ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರ ಹೊರಬಂದಿಲ್ಲ. ಸಾಮಾಜಿಕ ಜಾಲತಾಣದ ಫೋಟೋ ಆಧರಿಸಿ ಸತ್ವಾಧಾರ ನ್ಯೂಸ್ ಸುದ್ದಿ ಮಾಡಿದ್ದನ್ನು ಗಮನಿಸಿ, ಪತ್ರಿಕೆಯನ್ನು ಸಂಪರ್ಕ‌ಮಾಡಿದ ಕಾರ್ಯಕರ್ತರು ಇದು ಹಳೆಯ ಫೋಟೋ ಹಾಗೂ ಅನಂತಕುಮಾರ ಹೆಗಡೆ ಯಾವುದೇ ನಿರ್ಧಾರ ಮಾಡಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

RELATED ARTICLES  ತುಪ್ಪದ ದೀಪದ ಫಲಗಳು