ಕುಮಟಾ : ತಾಲೂಕಿನ ಮಿರ್ಜಾನ ‌ತಾರೀಬಾಗಿನಲ್ಲಿ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದು ಹಿಟಾಚಿ, ಕ್ರೇನ್ ಜಖಂಗೊಂಡು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಕುಮಟಾದ ತಾರೀಬಾಗಿಲಿನಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ನಡೆಸಲಾಗುತ್ತಿತ್ತು. ಈ ಕಾಮಗಾರಿ ಆರಂಭದಿಂದಲ್ಲೂ ಕಾಮಗಾರಿ ಮಾಡುತ್ತಿರುವಾಗ ಪಿಲ್ಲರ್‌ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್‌ಗಳು ಕುಸಿದು ಬಿದಿದ್ದೆ. ಇದರಿಂದಾಗಿ ಸೇತುವೆಯ ಕೇಳಭಾಗದಲ್ಲಿ ನಿಂತಿದ್ದ ಹಿಟಾಚಿ,ಕ್ರೇನ್ ಜಖಂಗೊಂಡಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

RELATED ARTICLES  ಸಾರ್ವಭೌಮ ಗುರುಕುಲಕ್ಕೆ ಶೇ. 100 ಫಲಿತಾಂಶ

ಸೇತುವೆಯ ಕಳಪೆ ಕಾಮಗಾರಿ ಕಂಡು ಗ್ರಾಮಸ್ಥರ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಸ್ಥಳೀಯರು ಹಾಗೂ ಗುತ್ತಿಗೆ ಕಂಪನಿ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ಸಹ ಉಂಟಾಗಿದೆ.

RELATED ARTICLES  ಮಣಕಿ ಮೈದಾನದಲ್ಲಿ ನುಡಿಹಬ್ಬ : ನೆಲ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಗಣ್ಯರ ಕರೆ.