ಶಿರಸಿ : ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಅರು ಬಾರಿ ಗೆದ್ದು ಕಳೆದ ಚುನಾವಣೆಯಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕೆ ಇಳಿಸಿದೆ. ಇದರಿಂದ ಸಂಭ್ರಮ ಹಂಚಿಕೊಂಡಿದ್ದ ಕಾಗೇರಿ, ತನಗೆ ಟಿಕೆಟ್ ಕೊಟ್ಟಿದ್ದಕ್ಕೆ ಕೇಂದ್ರದ ನಾಯಕರಿಗೆ ಧನ್ಯವಾದ ಹೇಳಿದ್ದರು. ಅಲ್ಲದೆ ಉ.ಕ ಬಿಜೆಪಿಯ ಭದ್ರಕೋಟೆಯಾಗಿದ್ದು ನನ್ನ ಗೆಲುವು ನಿಶ್ಚಿತ. ಅನಂತ ಕುಮಾರ್ ಹೆಗಡೆಯೊಂದಿಗೆ ಭೇಟಿಯಾಗಿ ಅವರ ಸಹಕಾರ ಕೋರುತ್ತೇನೆ. ನಾನು ಮತ್ತು ಅನಂತಕುಮಾರ ಹೆಗಡೆ ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದರು.
ಆದರೆ ರಾಜಕೀಯದಲ್ಲಿ ತನ್ನದೇ ವಿಶೇಷ ನಡೆ ಹಾಗೂ ಛಾತಿ ಹೊಂದಿರುವ ಅನಂತ ಕುಮಾರ್ ಹೆಗಡೆ ಈಗ ಯಾವುದಕ್ಕೂ ಮಣಿಯುತ್ತಿಲ್ಲ. ಹೀಗಾಗಿ ಅನಂತಕುಮಾರ್ ಹೆಗಡೆಯವರು ಕಾಗೇರಿಯವರಿಗೆ ಬಲವಾಗಿ ಬರುವ ನಿರೀಕ್ಷೆಯೇ ಬಿಟ್ಟರೆ, ಸಾಧ್ಯತೆಗಳು ತೀರಾ ಕಡಿಮೆಯಿದೆ. ಹೀಗಾಗಿ ಕಾಗೇರಿ ಜೊತೆಗೆ ಅವರು ಜೋಡೆತ್ತು ಆಗುವುದಿರಲಿ ಕಾಗೇರಿಯವರಿಗೆ ಅನಂತಕುಮಾರ ಹೆಗಡೆಯವರ ಭೇಟಿಯೂ ಸಿಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.
ಅನಂತ ಕುಮಾರ್ ಹಗಡೆ ಕಳೆದ ಐದಾರು ದಿನಗಳಿಂದ ಯಾರ ಕೈಗೂ ಸಿಗದೆ ಮನೆಯಲ್ಲೇ ಇದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರನ್ನು ಭೇಟಿಯಾಗಲು ಕಾಗೇರಿಯವರು ಕೂಡ ಹೋಗಿ ಕಾದು ಕಾದು ಸುಸ್ತಾಗಿ ಕೊನೆಗೂ ಭೇಟಿಯಾಗದೇ ಮರಳಿದ್ದಾಗಿ ಮಾಹಿತಿ ಎಲ್ಲೆಡೆಯಿಂದ ಕೇಳಿಬರುತ್ತಲಿದೆ. ಒಟ್ಟಿನಲ್ಲಿ ರಾಜಕೀಯ ಚಿಗುರಂಗದಾಟ, ಯಾವ ಕಡೆಗೆ ಸಾಗಲಿದೆ ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.
ಇನ್ನು ಅನಂತಕುಮಾರ್ ಹೆಗಡೆ ಯಾವ ನಾಯಕರನ್ನೂ ಸಹ ಕಾಗೇರಿ ವಿಷಯದಲ್ಲಿ ಮಾತನಾಡಲು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇನ್ನು ಭಟ್ಕಳ ಮಾಜಿ ಶಾಸಕ, ಕೆಲವು ಮುಖಂಡರು ಅನಂತಕುಮಾರ್ ಹೆಗಡೆ ಮನೆಗೆ ಹೋಗಿಬಂದಿದ್ದರೂ ಸಂದಾನದ ಬಗ್ಗೆ ಬಾಯಿ ತಪ್ಪಿಯೂ ಮಾತನಾಡಿರಲಿಲ್ಲ.
ಇನ್ನು ಕಾಗೇರಿ ಕಚೇರಿಯಿಂದ ಟಿಕೆಟ್ ಘೋಷಣೆ ಆದ ದಿನದಿಂದ ಅನಂತಕುಮಾರ್ ಹೆಗಡೆರವರನ್ನು ಮುಖತಹ ಭೇಟಿ ಮಾಡಲು ಸಮಯ ಕೇಳಿದ್ದರು. ಆದರೇ ಅನಂತಕುಮಾರ್ ಹೆಗಡೆ ಕಚೇರಿಯಿಂದ ಸಮಯ ನೀಡಿರಲಿಲ್ಲ. ಏತನ್ಮಧ್ಯೆ ಸಂಧಾನಕ್ಕಾಗಿ ತೆರಳಿದ ಮಾಜಿ ಸಚಿವನ ಗನ್ ಮ್ಯಾನ್ ಫೋಟೋ ಕ್ಲಿಕ್ಕಿಸಿದ ವಿಚಾರದಲ್ಲಿ ಕೋಪಗೊಂಡ ಅನಂತಕುಮಾರ ಹೆಗಡೆ ಗನ್ ಮ್ಯಾನ್ ಹೊಡೆದಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಬಿಜಪಿ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.