ಕುಮಟಾ : ಕಳೆದ ಆರೆಂಟು ವರ್ಷಗಳಿಂದ ಸದಾ ಒಂದಿಲ್ಲೊಂದು ಸಮಾಜೋಪಕಾರೀ ಕಾರ್ಯಗಳನ್ನು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ತನ್ನ ಆದರ್ಶ ನಡೆಯಿಂದ ‘ಮಾದರಿ ಸಂಘಟನೆ’ ಎನಿಸಿಕೊಂಡಿರುವ ಇಲ್ಲಿನ ‘ವಿವೇಕನಗರ ವಿಕಾಸ ಸಂಘ’ವು ಮಾರ್ಚ್ 31 ರವಿವಾರದಂದು ‘ಆರೋಗ್ಯ ಅರಿವು’ ಹಾಗೂ ‘ಹಿರಿಯ ನಿವಾಸಿಗಳಿಗೆ ಸನ್ಮಾನ’ ಕಾರ್ಯಕ್ರಮ ಏರ್ಪಡಿಸಿದೆ.

ರವಿವಾರ ಸಂಜೆ 4.30 ಕ್ಕೆ ಶಾರದಾ ನಿಲಯ ಸರಕಾರೀ ಮಾದರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ‘ಆರೋಗ್ಯ ಅರಿವು’ ಕಾರ್ಯಕ್ರಮದಡಿಯಲ್ಲಿ ಕುಮಟಾ ತಾಲೂಕಾ ವೈದ್ಯಾಧಿಕಾರಿ ಡಾ.ಆಜ್ಞಾ ನಾಯಕ ಅವರು ಸ್ತನ ಕ್ಯಾನ್ಸರ್ ಕುರಿತು ವಿಸ್ತ್ರತ ಉಪನ್ಯಾಸ ನೀಡಲಿದ್ದು, ಆಸಕ್ತ ಎಲ್ಲ ಮಹಿಳೆಯರೂ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.

RELATED ARTICLES  ಕುಮಟಾದಲ್ಲಿ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ದಿನಕರ ಶೆಟ್ಟಿ.

ವಿವೇಕನಗರದಲ್ಲಿರುವ 80 ವರ್ಷ ಹಾಗೂ ಮೇಲ್ಪಟ್ಟ ಅಂತೂ 25 ಹಿರಿಯ ನಿವಾಸಿಗಳನ್ನು ಆಮತ್ರಿಸಲಾಗಿದ್ದು ,ಇದೇ ಸಂದರ್ಭದಲ್ಲಿ ಅವರೆಲ್ಲರಿಗೂ ‘ಗೌರವ-ಸನ್ಮಾನ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ಸರಕಾರ ಯಕ್ಷಗಾನ ಅಕೆಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅವರು ಉಪಸ್ಥಿತರಿದ್ದು ಆಶಯ ನುಡಿಗಳನ್ನಾಡಲಿದ್ದಾರೆ.

RELATED ARTICLES  ವಿಶೇಷ ಪುಸ್ತಕ ಮೇಳ : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಆಯೋಜನೆ : ಡಿ.೨೮ ರಿಂದ ಮೂರು ದಿನಗಳ ಕಾಲ "ಅನ್ವೇಷಣಾ ೨೦೨೩-೨೪"

ವಿವೇಕನಗರದವರಷ್ಟೇ ಅಲ್ಲದೇ ಕುಮಟಾ ಹಾಗೂ ಸುತ್ತಮುತ್ತಲಿನ ಜನತೆಯೂ ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ವಿವೇಕನಗರ ವಿಕಾಸ ಸಂಘದ ಅಧ್ಯಕ್ಷ ಡಾ.ಎಮ್.ಆರ್.ನಾಯಕ ಮತ್ತು ಕಾರ್ಯದರ್ಶಿ ಡಾ.ದಯಾನಂದ ಡಿ.ಭಟ್ಟ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
-jb