ಕುಮಟಾ : ತಾಲೂಕಿನ ಮಿರ್ಜಾನಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಬದಿಯ ಡಿವೈಡರ್‍ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

RELATED ARTICLES  ಉಚಿತ ಕಣ್ಣಿನ ತಪಾಸಣಾ ಶಿಬಿರ ಸಂಪನ್ನ.

ಘಟನೆಯಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕಾರು ಡಿಕ್ಕಿಯ ರಭಸಕ್ಕೆ ಹೆದ್ದಾರಿಗೆ ಅಳವಡಿಸಲಾದ ಬೀದಿ ದೀಪದ ಕಂಬ ಬುಡ ಸಮೇತ ಕಿತ್ತುಬಿದ್ದಿದೆ.

RELATED ARTICLES  ನಾಯಿ ತಪ್ಪಿಸಲು ಹೋಗಿ ಸ್ಕೂಟಿ ಪಲ್ಟಿ : ಗಂಭೀರ ಗಾಯ.

ಕಾರು ಅಂಕೋಲಾದಿಂದ ಕುಮಟಾ ಹೊರಟಿತ್ತು. ಡಿವೈಡರ್ ಮೇಲೇರಿದ ಕಾರನ್ನು ತೆರವುಗೊಳಿಸಲು ಅಲ್ಲಿನ ಸ್ಥಳೀಯರು ಸಹಕರಿಸಿದರು. ಘಟನೆಯಿಂದ ಲಕ್ಷಾಂತರ ರೂ. ಹಾನಿಯಾಗಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.