ಶಿರಸಿ : ಶಿರಸಿ ನಗರದಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಶಿಕ್ಷಕಿ ವಿಜಯಾ ಮಾಸ್ತೆಪ್ಪ ಬೋವಿ ಎಂಬುವವರು ಕೊನೆಯುಸಿರೆಳೆದಿದ್ದಾರೆ. ಇವರು ಬಂಡಲ್ ಶಾಲೆಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು.

RELATED ARTICLES  ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಮುಗಿಲೆತ್ತರದ ಸಾಧನೆ

ಇವರು ತಮ್ಮ ಗಂಡನ ಜೊತೆ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮಿರ್ಜಾನಕರ ಪೆಟ್ರೋಲ್ ಪಂಪ್ ಬಳಿ ಬೈಕ್ ನಿಯಂತ್ರಣ ತಪ್ಪಿ ಕೆಳೆಗೆ ಬಿದ್ದಿದೆ. ಈ ಸಂದರ್ಭದಲ್ಲಿ ಶಿಕ್ಷಕಿ ನಗರಸಭೆಯ ತ್ಯಾಜ್ಯ ತುಂಬುವ ಟ್ರಕ್ ಕೆಳೆಗೆ ಬಿದ್ದಿದ್ದರಿಂದ ಸಾವು ಕಂಡಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

RELATED ARTICLES  ಅನಂತಕುಮಾರ ಹೆಗಡೆಗೆ ಸಿಗಲಿದೆಯೇ ಗುಡ್ ನ್ಯೂಸ್..?