ಕುಮಟಾ : ಶ್ರೀ ಕ್ಷೇತ್ರ ಹೆಗಲೆ (ಭುಜಗಪುರ)ದ ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರೀ ದೇವೀಯ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಪ್ರಯುಕ್ತ ಏ.೨ ರ ಮಂಗಳವಾರ ರಾತ್ರಿ 9.30 ಕ್ಕೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ “ಯಕ್ಷಗಾನ” ಪ್ರದರ್ಶನ ನಡೆಯಲಿದೆ. ಭೀಷ್ಮ ವಿಜಯ, ಲವ-ಕುಶ, ಮೀನಾಕ್ಷಿ ಕಲ್ಯಾಣ ಆಖ್ಯಾನಗಳು ನಡೆಯಲಿದೆ.
ಕೃಷ್ಣಯಾಜಿ ಬಳ್ಕೂರು ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದು, ಭಾಗವತರಾಗಿ ಸರ್ವಶ್ರೀ ಚಂದ್ರಕಾಂತ ಮೂಡುಬೆಳ್ಳೆ, ಸೃಜನ್ ಗುಂಡೂಮನೆ, ಅಶೋಕ ಸರಳಗಿ, ಮೃದಂಗದಲ್ಲಿ ಸರ್ವಶ್ರೀ ಎನ್. ಜಿ. ಹೆಗಡೆ, ಗಣೇಶಮೂರ್ತಿ ಹುಲ್ಗಾರ, ಚಂಡೆಯಲ್ಲಿ ಸರ್ವಶ್ರೀ ಶಿವಾನಂದ ಕೋಟ, ಮಂಜುನಾಥ ನಾವಡ ಇರಲಿದ್ದಾರೆ.
ಮುಮ್ಮೇಳದಲ್ಲಿ ಪ್ರಸನ್ನ ಶೆಟ್ಟಿಗಾರ್, ಈಶ್ವರ ನಾಯ್ಕ ಮಂಕಿ, ಪ್ರವೀಣ ಗಾಣಿಗ ಕೆಮ್ಮಣ್ಣು. ನಾಗರಾಜ ಭಂಡಾರಿ, ರಾಜೇಶ ಭಂಡಾರಿ ಚಂದ್ರಹಾಸ ಹೊಸಪಟ್ಟಣ. ಸನ್ಮಯ ಭಟ್ಟ, ರತ್ನಾಕರ ಸರಳಗಿ, ದರ್ಶನ ಬಾಸೊಳ್ಳಿ, ಗಣಪತಿ ಅಚವೆ, ಕೌಶಿಕ ಮಂಗಳೂರು, ಶಶಿಕಾಂತ ಶೆಟ್ಟಿ. ಶಂಕರ ಉಳ್ಳೂರು. ನಾಗರಾಜ ಕುಂಕಿಪಾಲ, ನಾಗರಾಜ ಬಾರ್ಕೂರು, ಉಲ್ಲಾಸ ಕೋಟ, ಮಹಾಬಲೇಶ್ವರ ಕ್ಯಾದಗಿ, ಕಾರ್ತಿಕ ಪಾಂಡೇಶ್ವರ ಇರುವರು.
ಕಾರ್ಯಕ್ರಮಕ್ಕೆ ಕಲಾಸಕ್ತರು ಹಾಗೂ ಯಕ್ಷ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಚಂದಗಾಣಿಸಲು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಹಾಲಕ್ಕಿ ಸಮಾಜ ಮತ್ತು ಭಕ್ತವೃಂದದವರು ವಿನಂತಿಸಿದ್ದಾರೆ.