ಶಿರಸಿ : ತಾಲೂಕಿನ ಕುಮಟಾ ರಸ್ತೆ ಹೀಪನಳ್ಳಿ ಕ್ರಾಸ್ ಬಳಿ ಬೈಕ್ ಹಾಗು ಕಾರಿನ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಗಂಬೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯ ಗೊಂಡವರನ್ನು ಕೂಡಲೇ ಸರಕಾರಿ ಆಸ್ಪತ್ರಗೆ ಸಾರ್ವಜನಿಕರು ಸಾಗಿಸಿದ್ದಾರೆ. ಘಟನೆ ಬಗ್ಗೆ ಪೊಲೀಸ್ ತನಿಖೆ ನಂತರ ಪೂರ್ಣ ಮಾಹಿತಿ ಲಭ್ಯವಾಗಬೇಕಾಗಿದೆ.

RELATED ARTICLES  ಮಾನಸಿಕ ಖಿನ್ನತೆ - ಮಹಿಳೆ ಆತ್ಮಹತ್ಯೆ.

ಇನ್ನು ಶಿರಸಿ ತಾಲೂಕಿನ ಮದುರವಳ್ಳಿ ಕೆರೆಯಲ್ಲಿ ಎತ್ತಿಗೆ ನೀರು ಕುಡಿಸಲು ಹೋಗಿ ತಾನೇ ನೀರಲ್ಲಿ ಮುಳಗಿ ರೈತನೋರ್ವ ಮೃತಪಟ್ಟ ಘಟನೆ ನಡೆದಿದೆ. ವೆಂಕಟಪ್ಪ ನಾಯ್ಕ ಮೃತಪಟ್ಟ ರೈತ ನಾಗಿದ್ದಾನೆ. ಮೃತಪಟ್ಟ ರೈತನನ್ನು ಶವಗಾರಕ್ಕೆ ರೈತರು ಸಾಗಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

RELATED ARTICLES  ಮಂಗನ ಕಾಯಿಲೆಗೆ ಮೊದಲ ಬಲಿ.

ಶಿರಸಿ ತಾಲೂಕಿನ ಕಂಡ್ರಾಜಿಯಲ್ಲಿ ರೈತನ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಧರ್ಮಾ ತಿಪ್ಪಾ ನಾಯ್ಕ ಆತ್ಮಹತ್ಯಗೆ ಶರಣಾದ ರೈತ. ಮಳೆಯಿಲ್ಲದೇ ಬರ ಬಂದು ಒಣಗುತ್ತಿರುವ ತೋಟ,ಗದ್ದೆ, ಮೂರ್ನಾಲ್ಕು ಕೊಳವೆ ಬಾವಿ ತೆಗೆದರೂ ನೀರಿಲ್ಲ ಎಂದು ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.