ಉತ್ತರಕನ್ನಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಮುಖರು ಹಾಗೂ ಪದಾಧಿಕಾರಿಗಳಲ್ಲಿ ಹುರುಪುತುಂಬುವ ಉದ್ದೇಶದಿಂದ ಬಿಜೆಪಿ ಸಮಾವೇಶ ನಡೆಯಿತು.

ವಿಜಯಪುರ ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೋದಿಜಿ ೧೦ ವರ್ಷ ಆಳ್ವಿಕೆ ನಡೆಸಿರುವುದು ಕೇವಲ ಟ್ರೇಲರ್ ಅಷ್ಟೆ. ಇನ್ನು ಪಿಚ್ಚರ್ ಬಾಕಿ ಇದೆ ಎಂದ ಅವರು, ಶಾಸಕ ದಿನಕರ ಶೆಟ್ಟಿ ಜೊತೆಗೂಡಿ ವಿಧಾನಸಭೆಯ ಅಧಿವೇಶನದಲ್ಲಿ ಧರಣಿ ಕುಳಿತಾದ್ರೂ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಶಂಕುಸ್ಥಾಪನೆಯನ್ನು ನೆರವೇರಿಸಿಯೇ ತೀರುತ್ತೇವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಬೇಕು. ಮೋದಿಜೀ ಅವರ ಕೈ ಬಲಪಡಿಸಲು ನಮ್ಮ ಅಭ್ಯರ್ಥಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಬೇಕು. ಚುನಾವಣೆ ಒಂದು ಹಬ್ಬ ಇದ್ದಂತೆ ಎಲ್ಲರೂ ನಮ್ಮ ಪಕ್ಷದ ಕಮಲದ ಗುರುತಿಗೆ ಮತ ಹಾಕುವ ಮೂಲಕ ಬಿಜೆಪಿ ಗೆಲ್ಲಿಸೋಣ ಎಂದರು.

RELATED ARTICLES  ರಾಜ್ಯಮಟ್ಟಕ್ಕೆ‌ಆಯ್ಕೆಯಾದ ಕುಮಟಾದ ವಿಕಲಚೇತನ ವಿದ್ಯಾರ್ಥಿಗಳು.

ಮೋದಿಜೀ ಅವರು ಧರ್ಮ‌, ಜಾತಿ ನೋಡದೆ ಎಲ್ಲರಿಗೂ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಎಲ್ಲರೂ ಫಲಾನುಭವಿಗಳಾಗಿದ್ದಾರೆ. ಕೇವಲ 10 ವರ್ಷದ ಆಡಳಿತದ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಬಾಹ್ಯಾಕಾಶ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿ ಬಿಜೆಪಿ ಸರ್ಕಾರ ಇತಿಹಾಸವನ್ನು ನಿರ್ಮಿಸಿದೆ‌.

ಆದರೆ ಕಾಂಗ್ರೆಸ್‌ ಪಕ್ಷ ಎಪ್ಪತ್ತು ವರ್ಷಗಳ ಆಡಳಿತದಲ್ಲಿ ಮಾಡಿದ್ದು ಶೂನ್ಯ ಸಾಧನೆ. ತಮ್ಮ ಕುಟುಂಬದ ಅಭಿವೃದ್ಧಿಯನ್ನು ಮಾತ್ರ ಮಾಡಿಕೊಂಡಿದ್ದಾರೆ. ಅವರ ಅವಧಿಯಲ್ಲಿ ಹಗರಣಗಳ ಸರಮಾಲೆಯನ್ನೆ ಕಾಣಬಹುದು. ಮೋದಿಜೀ ನೇತೃತ್ವದ ಬಿಜೆಪಿ ಸರ್ಕಾರದ್ದು ಕಳಂಕ ರಹಿತ ಆಡಳಿತವಾಗಿದೆ.

ಐದುನೂರು ವರ್ಷಗಳಿಂದ ಗುಡಿಸಲಿನಲ್ಲಿ ಶ್ರೀ ರಾಮನನ್ನು ಪೂಜಿಸಲಾಗುತ್ತಿತ್ತು. ಆದರೆ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು ಹೇಳಿದಂತೆ ನಿಗದಿ ಪಡಿಸಿದ ದಿನಾಂಕದಂದು ಸರಯೂ ನದಿ ತೀರದಲ್ಲಿ ಭವ್ಯ ಶ್ರೀ ರಾಮಲಲ್ಲಾ ಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.

RELATED ARTICLES  ಉತ್ತರಕನ್ನಡ ಬಿಜೆಪಿಗೆ ಎನ್.ಎಸ್ ಹೆಗಡೆ ಸಾರಥ್ಯ : ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗರ ಗುಡುಗು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್.‌ಎಸ್.ಹೆಗಡೆ, ಶಾಸಕರಾದ ಶ್ರೀ ದಿನಕರ‌ ಶೆಟ್ಟಿ, ರೂಪಾಲಿ ನಾಯ್ಕ, ಸಂಚಾಲಕರಾದ ಶ್ರೀ ಗೋವಿಂದ ನಾಯ್ಕ, ಮಂಡಲದ ಶ್ರೀ ಜಿ.ಆಯ್‌ ಹೆಗಡೆ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ, ಜಿಲ್ಲಾ ಸಹ ಪ್ರಭಾರಿ ಪ್ರಸನ್ನ ಕೆರೆಕೈ, ಕ್ಷೇತ್ರದ ಪ್ರಭಾರಿ ಶ್ರೀ ಕೆ.ಜಿ.ನಾಯ್ಕ, ಜೆಡಿಎಸ್. ಪ್ರಮುಖರಾದ ಶ್ರೀ ಸೂರಜ ನಾಯ್ಕ ಸೋನಿ, ಶ್ರೀ ಸಿ.ಜಿ‌.ಹೆಗಡೆ, ಬಿಜೆಪಿ ಪ್ರಮುಖರಾದ ಶ್ರೀ ನಾಗರಾಜ ನಾಯ್ಕ ತೊರ್ಕೆ, ಶ್ರೀ ಶಿವಾನಂದ ಹೆಗಡೆ, ಪ್ರಧಾನಕಾರ್ಯದರ್ಶಿಗಳಾದ ಶ್ರೀ ಗುರುಪ್ರಸಾದ ಹೆಗಡೆ, ಶ್ರೀ ಪ್ರಶಾಂತ ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಗಜಾನನ ಗುನಗಾ, ಶ್ರೀ ಸುಬ್ರಾಯ ವಾಳ್ಕೆ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಬೂತ್‌ ಪ್ರಮುಖರು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.