ಭಟ್ಕಳ: ಮುರ್ಡೇಶ್ವರದಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯ ಮೇಲೆ ಪಂಚಾಯತ್ ವ್ಯಾಪ್ತಿಯ ಅಂಗಡಿಗಳ ಮಾಲೀಕರನ್ನು ಕರೆಯಿಸಿ ಸಭೆಯ ಕರೆದು ಪ್ಲಾಸ್ಟಿಕ್ ಮಾರಾಟ ಬಳಕೆಯ ನಿಷೇಧದ ಮೇಲಿನ ಹೇರಿಕೆಯ ಬಗ್ಗೆ ವಿವರಿಸಲಾಗಿದ್ದು, ಆದರೂ ಸಹ ಕೆಲವು ಅಂಗಡಿಕಾರರು ಗೌಪ್ಯವಾಗಿ ಪ್ಲಾಸ್ಟಿಕ್ ಮಾರಾಟ ಬಳಕೆ ಮಾಡುತ್ತಿದ್ದರ ಹಿನ್ನೆಲೆಯಲ್ಲಿ ಇಲ್ಲಿನ ಮಾವಳ್ಳಿ-1 ಹಾಗೂ ಮಾವಳ್ಳಿ-2 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಂಗಡಿಗಳ ಮೇಲೆ ಪಂಚಾಯತ್ ಪಿಡಿಓ ಮಾರುತಿ ಐ. ದೇವಾಡಿಗ ನೇತೃತ್ವದಲ್ಲಿ ದಾಳಿ ಕೈಗೊಳ್ಳಲಾಯಿತು.

ಮುರ್ಡೇಶ್ವರ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಸುಂದರ ಪ್ರದೇಶವನ್ನು ಪ್ಲಾಸ್ಟಿಕ್ ಬಳಕೆಯ ತ್ಯಾಜ್ಯ ಹೊಸಲು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾವಳ್ಳಿ-1 ಹಾಗೂ ಮಾವಳ್ಳಿ-2 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಧ ಅಂಗಡಿ ಮಾಲೀಕರಿಗೆ, ತಳ್ಳುವ ಗಾಡಿ, ನೈಟ್ ಕ್ಯಾಂಟೀನ್ ಸೇರಿದಂತೆ ರಸ್ತೆ ಬದಿಯ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಮಾರಾಟ ಹಾಗೂ ನಿಷೇಧದ ಬಗ್ಗೆ ಸಭೆ ಕರೆದು ತಿಳುವಳಿಕೆ ಪತ್ರ ನೀಡಲಾಗಿತ್ತು. ಜೊತೆಗೆ ಸರ್ಕಾರದ ಸುತ್ತೋಲೆಯ ಪ್ರಕಾರ ಸಭೆ ಕರೆದು ನವೆಂಬರ್ 5 ರೊಳಗಾಗಿ ಗಡುವು ನೀಡಲಾಗಿದ್ದು, ಇನ್ನು ತನಕವೂ ಸುತ್ತೋಲೆಗೆ ಕೆಲವು ಸ್ಥಳೀಯ ಅಂಗಡಿಕಾರರು ಗೌಪ್ಯವಾಗಿ ಪ್ಲಾಸ್ಟಿಕ್ ಬಳಕೆ ಮಾರಾಟ ಹಾಗೂ ಬಳಕೆ ನಿಷೇಧವಾಗದ ಕಾರಣ ಪಂಚಾಯತ್ ಪಿಡಿಓ ಮಾರುತಿ ಐ. ದೇವಾಡಿಗ ನೇತೃತ್ವದಲ್ಲಿ ಪಂಚಾಯತ್ ಸಿಬ್ಬಂದಿಗಳು ಅಂತಹ ಅಂಗಡಿಗಳ ಮೇಲೆ ದಾಳಿ ಮಾಡಿ ಕೆಲವು ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು. ಹಾಗೂ ಸರ್ಕಾರ ರಾಜ್ಯಾದ್ಯಂತ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧ ಮಾಡಿ ಅಧಿಸೂಚನೆ ಹೊರಡಿಸಿದಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದ್ದರು ಸುತ್ತೋಲೆಗೆ ಬೆಲೆ ಕೊಡದೇ ಇದ್ದ ಕಾರಣ ದಾಳಿ ನಡೆಸಲಾಯಿತು.

RELATED ARTICLES  ಹಿರೇಗುತ್ತಿ ಹೈಸ್ಕೂಲ್‍ನಲ್ಲಿ ಕುಮಟಾ ಎಲ್. ಐ. ಸಿ ಯಿಂದ ಸಹಾಯ ಧನ ವಿತರಣೆ.

ಇನ್ನು ಮುಂದಿನ ದಿನದಲ್ಲಿ ಅಂಗಡಿಕಾರರಿಗೆ ಮಾರಾಟ ಹಾಗೂ ಬಳಕೆ ಮಾಡದಂತೆ ಎಚ್ಚರಿಕೆಯನ್ನು ಸಹ ನೀಡಲಾಯಿತು. ಅದೇ ರೀತಿ ಮುಂಬರುವ ದಿನದಲ್ಲಿ ವಾರಕ್ಕೆ ಒಮ್ಮೆಯಾದರೂ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಪಂಚಾಯತ್ ಲೆಕ್ಕಪರಿಶೋಧಕರ ಲೋಕೇಶ ಸೇರಿದಂತೆ ಮಾವಳ್ಳಿ-1 ಹಾಗೂ ಮಾವಳ್ಳಿ-2 ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಇದ್ದರು. 

RELATED ARTICLES  ಯುವ ಉದ್ಯಮಿ ಮೋಹನದಾಸ ಪೈ ಇನ್ನಿಲ್ಲ.