ಕುಮಟಾ : ಮಿರ್ಜಾನಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಸ್ಕೂಟಿಯೊಂದು ಹೆದ್ದಾರಿ ಪಕ್ಕದ‌ ಡಿವೈಡರ್‌ಗೆ ಡಿಕ್ಕಿ ಹೊಡೆದು, ಸವಾರ ಸೇರಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡವರು ಬೆಟ್ಕುಳಿಯ ನಿವಾಸಿ ಇಸಾಕ್ ಹಾಗೂ ಆತನ ಇಬ್ಬರೂ ಮಕ್ಕಳು ಎಂದು ತಿಳಿದುಬಂದಿದೆ.‌ ಇವರು ಕುಮಟಾದಿಂದ ಬೆಟ್ಕುಳಿಗೆ ಬರುತ್ತಿರುವಾಗ ಮಿರ್ಜಾನ ಬಳಿ ಹೆದ್ದಾರಿ ಪಕ್ಕದ ಡಿವೈಡರಿಗೆ ಸ್ಕೂಟಿ ಡಿಕ್ಕಿಯಾಗಿದೆ. ಇದರಿಂದಾಗಿ ಸ್ಕೂಟಿ ಚಲಿಸುತ್ತಿ ವ್ಯಕ್ತಿ ಹಾಗೂ ಆತನ ಇಬ್ಬರೂ ಮಕ್ಕಳು ಗಂಭೀರಗೊಂಡಿದ್ದಾರೆ. ಗಾಯಗೊಂಡ ಮೂವರನ್ನ 108ವಾಹನದ ಮೂಲಕ ಕುಮಟಾ ಸರಕಾರಿ ಆಸ್ಪತ್ರೆ ರವಾನಿಸಲಾಗಿದ್ದು,ಅಪಘಾತಕ್ಕೆ ಒಳಗಾದವರ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

RELATED ARTICLES  ಸರಸ್ವತಿ ಪಿ.ಯು ಕಾಲೇಜಿನಲ್ಲಿ 'ಸಂಸ್ಕಾರಧಾರೆ' ಅರ್ಥಪೂರ್ಣ ಕಾರ್ಯಕ್ರಮ