ಕುಮಟಾ : ಪಟ್ಟಣದ ಮಂದಾರ ಎಲೈಟ್ ಸಮುಚ್ಚಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜೆ.ಎಸ್.ಆರ್ ಎಂಟರ್ಪ್ರೈಸಸ್ ಅವರ ಗೃಹೋಪಯೋಗಿ, ಗೃಹಾಲಂಕಾರ, ಫರ್ನೀಚರ್ ಹಾಗೂ ಇತರ ಉಪಯುಕ್ತ ವಸ್ತುಗಳ ಬ್ರಹತ್ ಮಳಿಗೆ ‘ಬ್ರೌನ್ ವುಡ್’ ಇದರ ಉದ್ಘಾಟನಾ ಸಮಾರಂಭವು ಮಂಗಳವಾರ ಯುಗಾದಿಯ ಪುಣ್ಯ ಪರ್ವ ಕಾಲದಲ್ಲಿ ನಡೆಯಲಿದೆ. ಶ್ರೀ ಆದಿಚುಂಚನಗಿರಿ ಶಾಖಾ ಮಠ ಮಿರ್ಜಾನಿನ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮಿಜಿ ಮಳಿಗೆ ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ರಾಮಚಂದ್ರ ಮಡಿವಾಳ, ರಮಾ ಆರ್. ಮಡಿವಾಳ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ರಾಜೇಶ ಮಡಿವಾಳ, ಕೆನರಾ ಬ್ಯಾಂಕ್ ನ ಜಯಂತ ಅಡಿಗ, ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಧಾರ್ಮಿಕ ಮುಖಂಡ ಕೃಷ್ಣ ಪೈ, ಸಿಪಿಐ ತಿಮ್ಮಪ್ಪ ನಾಯ್ಕ, ಉದ್ಯಮಿಗಳಾದ ಗಣೇಶ ಗಾಂವ್ಕರ, ವಿಠಲ ನಾಯ್ಕ, ನಿವೃತ್ತ ಯೋಧ ಗಣಪತಿ ಆರ್.ಎಂ ಹಾಗೂ ಇತರರು ಭಾಗವಹಿಸಲಿದ್ದಾರೆ.

ಕುಮಟಾದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಚಂದಗಾಣಿಸುವ ಜೊತೆಗೆ ತಮ್ಮನ್ನು ಪ್ರೋತ್ಸಾಹಿಸುವಂತೆ ಜೆ.ಎಸ್.ಆರ್ ಎಂಟರ್ಪ್ರೈಸಸ್ ನವರು ವಿನಂತಿಸಿದ್ದಾರೆ.