ಕುಮಟಾ : ಯುಗಾದಿಯ ಶುಭ ಸಂದರ್ಭದಲ್ಲಿ ಪಟ್ಟಣದ ಮಂದಾರ ಎಲೈಟ್ ಸಮುಚ್ಚಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜೆ.ಎಸ್.ಆರ್ ಎಂಟರ್ಪ್ರೈಸಸ್ ಅವರ ಫರ್ನೀಚರ್, ಇಂಟೀರಿಯರ್ಸ್, ಕರ್ಟೈನ್, ವಾಲ್ ಸೆಟ್, ಎಲೆಕ್ಟ್ರಾನಿಕ್ಸ್, ಹೋಂಮ್ ಅಪ್ಲಾಯನ್ಸ್ ನ ಬ್ರಹತ್ ಮಳಿಗೆ ‘ಬ್ರೌನ್ ವುಡ್’ ನೂತನ ಶೋ ರೂಂಮ್ ಅನ್ನು ಶ್ರೀ ಆದಿಚುಂಚನಗಿರಿ ಶಾಖಾ ಮಠ ಮಿರ್ಜಾನಿನ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮಿಜಿ ಉದ್ಘಾಟಿಸಿದರು.
ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಂಡು ಮನೆಯಲ್ಲಿ ಇದ್ದರೆ ಯಾವುದೇ ಸಾಧನೆ ಮಾಡಲು ಸಾದ್ಯವಿಲ್ಲ. ನಾವು ಕಷ್ಟಪಟ್ಟು ಕಾರ್ಯ ಮಾಡಿದರೆ, ಭಗವಂತನನ್ನು ನಂಬಿದರೆ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ನಮ್ಮನ್ನು ಭಗವಂತ ಇಡುತ್ತಾನೆ ಎಂಬುದಕ್ಕೆ ಬ್ರೌನ್ ವುಡ್ ಹಾಗೂ ಮಂದಾರ ಗ್ರುಪ್ ಅವರು ಸಾಕ್ಷಿ ಎಂದರು. ಬ್ರೌನ್ ವುಡ್ ಮಳಿಗೆಯನ್ನು ಕುಮಟಾದಲ್ಲಿ ಸ್ಥಾಪಿಸುವ ಮೂಲಕ ಜನರ ಸೇವೆಗೆ ನಿಂತಿದ್ದಾರೆ. ಜನರು ಅದರ ಸೇವೆ ಪಡೆಯಬೇಕು ಎಂದರು.
ನಾವು ಮಾಡುವ ಕಾರ್ಯಕ್ಕೆ ಭಗವಂತ ಜೊತೆಯಾಗಿರುತ್ತಾನೆ ಎಂಬುದನ್ನು ನಾವು ಅಚಲವಾಗಿ ನಂಬಿರಬೇಕು. ಆಗ ದೇವರೂ ನಮ್ಮ ಜೊತೆಗೆ ಇರುವುದು ನಿಶ್ಚಿತ. ಇಂತಹ ಸಂಸ್ಥೆಗಳೂ ಅದೇ ನಂಬಿಕೆಯಲ್ಲಿ ಮುಂದುವರೆಯುತ್ತಿರಲಿ ಎಂದು ಹಾರೈಸಿ, ಸಂಸ್ಥೆ ಮತ್ತಷ್ಟು ಮಗದಷ್ಟು ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದರು.
ಹೆಸ್ಕಾಂ ಕುಮಟಾದ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ರಾಜೇಶ ಮಡಿವಾಳ ಮಾತನಾಡಿ, ಕಷ್ಟಪಟ್ಟರೆ ಮನುಷ್ಯ ಎತ್ತರದ ಸ್ಥಾನಕ್ಕೆ ಏರಬಹುದು ಎನ್ನುವುದಕ್ಕೆ ಮಂದಾರ ಗ್ರುಪ್ ನ ಗಣೇಶ ಆರ್. ಎಂ ಅವರೇ ಸಾಕ್ಷಿ ಎಂದು ಹೇಳುತ್ತಾ, ಮುಂದಿನ ದಿನದಲ್ಲಿ ಉದ್ಯಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಮಾತನಾಡಿ ಕುಮಟಾದಲ್ಲಿ ಇಂತಹುದೊಂದು ಮಳಿಗೆಯ ಅಗತ್ಯತೆ ಇತ್ತು, ಆ ನಿಟ್ಟಿನಲ್ಲಿ ಬ್ರೌನ್ ವುಡ್ ತಂಡದ ಪ್ರಯತ್ನ ಶ್ಲಾಘನೀಯ ಎಂದರು. ಇದು ಉತ್ತಮಸೇವೆ ನೀಡಿ ಜನ ಮನ ಗೆಲ್ಲಲ್ಲಿ ಎಂದರು.
ರೆಸಾರ್ಟ ಮಾಲಿಕ ಗಣೇಶ ಗಾಂವ್ಕರ ಕುಮಟಾದಲ್ಲಿ ಇಂತಹ ಅತ್ಯುತ್ತಮ ಮಳಿಗೆಯು ಬಂದಿರುವುದು ಸಂತಸದ ವಿಚಾರ ಎಂದರು.
ಭಟ್ಕಳದ ಉದ್ಯಮಿ ವಿಠಲ ನಾಯ್ಕ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಭಟ್ಕಳದಲ್ಲಿ ಪ್ರಾರಂಭವಾದ ಬ್ರೌನ್ ವುಡ್ ಇದೀಗ ಕುಮಟಾದಲ್ಲಿಯೂ ತನ್ನ ಶಾಖೆ ಪ್ರಾರಂಭಿಸಿದೆ. ಇಂದು ಕುಮಟಾದಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಎನ್ನುತ್ತಾ, ಬ್ರೌನ್ ವುಡ್ ತಂಡ ಯಾವುದೇ ಗ್ರಾಹಕರನ್ನು ಬರಿಗೈಲಿ ಕಳುಹದ ಅಚ್ಚುಕಟ್ಟಿನ ವ್ಯವಹಾರ ಮಾಡುತ್ತದೆ ಎಂದರು.
ನಿವೃತ್ತ ಯೋಧ ಹಾಗೂ ಮಂದಾರ ಗ್ರುಪ್ ಮಾಲಿಕ ಗಣಪತಿ ಆರ್. ಎಂ ಮಾತನಾಡಿ ತುಂಬಾ ಶ್ರಮ ವಹಿಸಿ ಈ ಬ್ರೌನ್ ವುಡ್ ಈ ಮಳಿಗೆಯನ್ನು ಸ್ಥಾಪಿಸಲಾಗಿದೆ. ಕುಮಟಾದ ಜನರಿಗೆ ಉದ್ಯೋಗ ನೀಡುವ ಕನಸೂ ನನಸಾಗಿದ್ದು, ಸಂತಸದ ವಿಚಾರ ಎಂದರು. ಸಂಸ್ಥೆ ಇನ್ನೂ ಬೆಳೆಯಲಿ, ನಾವು ಸದಾ ಜೊತೆಗೆ ಇರುತ್ತೇವೆ ಎಂದರು.
ರಾಮಚಂದ್ರ ಮಡಿವಾಳ, ರಮಾ ಆರ್. ಮಡಿವಾಳ ವೇದಿಕೆಯಲ್ಲಿ ಇದ್ದರು. ಸಂತೋಷ, ಗಿರೀಶ, ಅಂಜನಾ, ರಾಜೇಶ, ಸುಧಾಕರ ಹಾಗೂ ಇತರರು ಸಹಕರಿಸಿದರು.