ಕುಮಟಾ : ಬುಧವಾರ ಘೋಷಣೆಯಾದ ದ್ವಿತೀಯ ಪಿ.ಯು ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕು. ಧ್ಯಾನ ರಾಮಚಂದ್ರ ಭಟ್ಟ ೬೦೦ ಅಂಕಗಳಿಗೆ ೫೯೫ (ಶೇ. ೯೯.೧೬) ಅಂಕ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾನೆ.

RELATED ARTICLES  ತಾಯಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಮಹಿಳೆ ನಾಪತ್ತೆ.

ನಿರಂತರ ಪರಿಶ್ರಮದಿಂದ ಯಾವುದೇ ಸಾಧನೆ ಸಾಧ್ಯ ಎಂಬುದನ್ನು ಈತ ತೋರಿದ್ದಾನೆ. ಅಪ್ಪಟ ಕೃಷಿ ಕುಟುಂಬದಲ್ಲಿ ಜನಿಸಿದ ಈತನ ತಂದೆ ಕೃಷಿಯ ಜೊತೆಗೆ ದೇವಾಲಯದ ಅರ್ಚಕರಾಗಿದ್ದಾರೆ.

ಪಟ್ಟಣದ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನನಲ್ಲಿ ಅಧ್ಯಯನ ಮಾಡುತ್ತಿರುವ ಧ್ಯಾನ ಅಭ್ಯಾಸದಲ್ಲಿಯೂ ನಿರಂತರತೆ ತೋರಿದ ವಿದ್ಯಾರ್ಥಿ ಇಂಗ್ಲಿಷ್ ೯೬, ಸಂಸ್ಕೃತ ೧೦೦, ಇಕೊನೊಮಿಕ್ಸ್ ೧೦೦, ಬಿಸಿನೆಸ್ ಸ್ಟಡೀಸ್ ೧೦೦, ಅಕೌಂಟೆನ್ಸಿ ೯೯, ಕಂಪ್ಯೂಟರ್ ಸೈನ್ಸ್ ೧೦೦ ಅಂಕ ಸೇರಿ ಒಟ್ಟು ೬೦೦ ಅಂಕಗಳಿಗೆ ೫೯೫ ಅಂಕ ಪಡೆಯುವ ಮೂಲಕ ಈತ ಸಾಧನೆ ಮಾಡಿದ್ದಾನೆ.

RELATED ARTICLES  ಸಿಇಟಿ ವಿದ್ಯಾರ್ಥಿಗಳಿಗಾದ ಅನ್ಯಾಯ ಸರಿಪಡಿಸಲಿ : ಎಂ.ಜಿ ಭಟ್ಟ