ಕುಮಟಾ : ಕಾರವಾರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಬನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬ್ಯಾನರ್ ನಲ್ಲಿ ಫೋಟೋ ಇಲ್ಲ ಎಂಬ ವಿಚಾರಕ್ಕೆ ಬೇಸರಗೊಂಡು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ವಾಪಸ್ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಸುದ್ದಿಗೆ ಸ್ವತಃ ಸೂರಜ ನಾಯ್ಕ ಸೋನಿ ಅವರೇ ಸ್ಪಷ್ಟನೆ ನೀಡಿದ್ದು, ಇದು ಶುದ್ಧ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

RELATED ARTICLES  ಮಹಿಳೆ‌ ನಾಪತ್ತೆ..! ಸಮುದ್ರದಲ್ಲಿ ಆತ್ಮಹತ್ಯೆ?

ವಿಡಿಯೋ ನೋಡಿ.

ಸಾಮಾಜಿಕ ಜಾಲತಾಣದಲ್ಲಿ ನಾನು ಬೇಸರಗೊಂಡು ಬಂದಿದ್ದೇನೆ ಎಂದು ವರದಿ ಹರಿದಾಡುತ್ತಿದೆ. ಇದು ಅಪ್ಪಟ ಸುಳ್ಳು. ನನಗೆ ಆ ರೀತಿಯ ಯಾವುದೇ ಬೇಸರ ಇಲ್ಲ ಎಂದಿರುವ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಾನು ಅವರ ಜೊತೆಗಿದ್ದೆ ಅವರಿಗೆ ಶುಭಾಶಯವನ್ನು ಕೋರಿದೆ ಮೆರವಣಿಗೆಯಲ್ಲೂ ಪಾಲ್ಗೊಂಡೆ. ಬಹಳ ಅದ್ಭುತವಾದ ಮೆರವಣಿಗೆ ಎಂದು ಬಣ್ಣಿಸಿದರು. ನಾವೆಲ್ಲರೂ ಸೇರಿ ಕಾಗೇರಿಯವರನ್ನು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಾರ್ಯಕರ್ತರಿಗೆ ಅವರು ಹೇಳಿದ್ದಾರೆ.

RELATED ARTICLES  30 ಫೀಟ್ ಆಳದ ಬಾವಿಯಲ್ಲಿ ಬಿದ್ದಿರುವ ಆಕಳ ರಕ್ಷಣೆ