ಕುಮಟಾ : ಹೊಲನಗದ್ದೆಯ ಆರ್.ಎನ್. ಹೆಗಡೆ (66) ಮಂಗಳವಾರ ಬೆಳಗಿನ ಜಾವ 2.50 ಕ್ಕೆ ನಿಧನರಾದರು. ಆರ್. ಎನ್. ಹೆಗಡೆ ಪ್ರಾಥಮಿಕ ಶಾಲಾ ಮುಖ್ಯಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಇವರು ಕಾಂಚಿಕಾಂಬಾ ಹವ್ಯಕ ವಲಯದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಪ್ರಸ್ತುತ ಹವ್ಯಕ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದರು.

RELATED ARTICLES  ಉದಯ ಸ್ಪೋರ್ಟ್ಸ್ ವರ್ಲ್ಡ್' ನೂತನ ಮಳಿಗೆಯ ಉದ್ಘಾಟನಾ ಸಮಾರಂಭ : ನೀವೂ ಜೊತೆಗಿದ್ದು ಬೆಂಬಲಿಸಲು ಸಂಸ್ಥಾಪಕರ ಮನವಿ.

ಅನೇಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು, ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯರು ಆಗಿದ್ದು ಸಮಾಜದ ಸುಧಾರಣೆಗಾಗಿ ದುಡಿಯುತ್ತಿದ್ದರು. ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಿದ್ದ ಇಂತವರನ್ನು ಕಳೆದು ಕೊಂಡ ಸಮಾಜ ಬಡವಾಗಿದೆ ಎಂದು ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ ಭಟ್ಟ, ಹೊಲನಗದ್ದೆ ಹವ್ಯಕ ಸಂಘದ ಅಧ್ಯಕ್ಷ ಕೆ. ಆರ್. ಭಟ್ಟ, ಉಪಾಧ್ಯಕ್ಷ ಎನ್. ವಿ. ಹೆಗಡೆ. ಶಾಸಕ ದಿನಕರ ಶೆಟ್ಟಿ. ಗ್ರಾಂ ಪಂಚಾಯತ್ ಹೊಲನಗದ್ದೆ ಅಧ್ಯಕ್ಷ ಎಂ. ಎಂ. ಹೆಗಡೆ. ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯ ಬಾಡದ ಆಡಳಿತ ಮಂಡಳಿಯ ಡಾ. ಎಸ್. ಎಸ್. ಹೆಗಡೆ ಅನೇಕರು ಮೃತರ ಆತ್ಮಕ್ಕೆ ಶಾಂತಿ ಕೋರಿ ಕಂಭನಿ ಮಿಡಿದಿದ್ದಾರೆ.

RELATED ARTICLES  ಕುಮಟಾಕ್ಕೆ ನೂತನ ತಹಶೀಲ್ದಾರರಾಗಿ ಪ್ರವೀಣ.