ಹೊನ್ನಾವರ : ತಾಲೂಕಿನ ಹೊಸಾಕುಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಮತ್ತು ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಹಾಗೂ ಹೊಸಾಕುಳಿ ಗ್ರಾಮದ ಹಿರೇಮಕ್ಕಿಯಲ್ಲಿ ಅನಾದಿಯಿಂದ ನೆಲೆಸಿರುವ ನಾಗಸಹಿತಳಾದ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತಿ ಹಾಗೂ ಶತಚಂಡಿಕಾ ಯಾಗವನ್ನು ರಾಮಚಂದ್ರಾಪುರ ಮಠದ ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಮಾರ್ಗದರ್ಶನದಂತೆ ಚೈತ್ರ ಶುದ್ಧ ತ್ರಯೋದಶಿ ಎ.೨೧ ರಿಂದ ರವಿವಾರದಿಂದ ಚೈತ್ರ ಶುದ್ಧ ಪೂರ್ಣಿಮೆ ಎ.೨೩ ಮಂಗಳವಾರದ ಪರ್ಯಂತ ಹಮ್ಮಿಕೊಂಡಿದ್ದು,  ವೇ.ಮೂ.ಶ್ರೀ ಶಂಕರ ಗಣಪತಿ ಭಟ್ಟ, ತೋಟಿ ಗಾಣಗೇರಿ ಇವರ ಪ್ರಧಾನ ಆಚಾರ್ಯತ್ವದಲ್ಲಿ ಈ ಕಾರ್ಯಕ್ರಮಗಳು ನೆರವೇರಲಿವೆ. ಭಗವತ್ ಪ್ರೀತ್ಯರ್ಥವಾಗಿ, ಲೋಕಕಲ್ಯಾಣಾರ್ಥವಾಗಿ ನೆರವೇರಲಿರುವ ಈ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾದಿಗಳು ಸಕುಟುಂಬ ಸಪರಿವಾರದೊಂದಿಗೆ ಆಗಮಿಸಿ, ಶ್ರೀದೇವರ ಕೃಪಾಶೀರ್ವಾದಕ್ಕೆ ಭಾಜನರಾಗುವಂತೆ ಶ್ರೀ ದುರ್ಗಾಂಬಾ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ಕೆಎಸ್ ಆರ್ ಟಿಸಿ ಮೇಲ್ವಿಚಾರಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ಶ್ರೀ ಗಣೇಶ ಪೂಜೆ, ನಾಂದಿ, ಮಾತೃಕಾ ಪೂಜೆ, ಕೌತುಕ ಪೂಜೆ, ಪುಣ್ಯಾಹ, ಪ್ರಧಾನ ಸಂಕಲ್ಪ, ಋತ್ವಿಕ್ ವರ್ಣನೆ. ಮಧುಪರ್ಕಪೂಜೆ. ಬ್ರಹ್ಮಕೂರ್ಚಹೋಮ, ಅಷ್ಟದ್ರವ್ಯಾತ್ಮಕ ಅಷ್ಟನಾರಿಕೇಳ ಗಣಹವನ, ಶ್ರೀ ದುರ್ಗಾಸಪ್ತಶತೀ ಪಾರಾಯಣ, ಮಹಾಮಂಗಳಾರತಿ, ಪ್ರಸಾದ ಭೋಜನಗಳು ರವಿವಾರ ಬೆಳಗ್ಗೆ ನಡೆದರೆ, ಸಂಜೆ ಶಾಂತಿಮಂತ್ರ ಪಠಣ, ವಿಷ್ಣು ಸಹಸ್ರನಾಮ ಪಠಣ. ನವಾಕ್ಷರೀ ಜಪ, ಕುಂಕುಮಾರ್ಚನೆ, ಮಂಗಳಾರತಿ ನಡೆಯಲಿದೆ.

RELATED ARTICLES  ಮಾರ್ಚ 24 ರಂದು ಶ್ರೀನಿಧಿ ಸೇವಾವಾಹಿನಿ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ.

ಸೋಮವಾರ ಬೆಳಗ್ಗೆ, ಶಾಂತಿಮಂತ್ರ ಪಠಣ, ಶ್ರೀ ದುರ್ಗಾಸಪ್ತಶತೀ ಪಾರಾಯಣ, ಅಗ್ನಿಗ್ರಹಣ, ದುರ್ಗಾ ಹೋಮ, ಕಲಾವೃದ್ಧಿ ಹೋಮ, ಮಹಾಮಂಗಳಾರತಿ, ಪ್ರಸಾದ ಭೋಜನ. ಸಂಜೆ – ಯಾಗಶಾಲಾ ಪ್ರವೇಶ, ಕುಂಡ-ಮಂಟಪಸಂಸ್ಕಾರ, ಯೋಗಿನೀಬಲಿ, ರಾಜೋಪಚಾರ ಪೂಜೆ, ಮಂಗಳಾರತಿ ನಡೆಯಲಿದೆ.

ಮಂಗಳವಾರ ಬೆಳಗ್ಗೆ, ನವಗ್ರಹಶಾಂತಿ, ಅನ್ನಸಂತರ್ಪಣೆ, ಆಶೀರ್ವಚನ. ಶತಚಂಡಿಕಾಯಾಗ, ಪೂರ್ಣಾಹುತಿ, ಮಹಾಪೂಜೆ, ಅನ್ನಸಾರ್ಪಣೆ ಆಶೀರ್ವಚನ ನಡೆಯಲಿದೆ. ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.